ಕರಾವಳಿ

ಯುವತಿಗೆ ಚೂರಿ ಇರಿದು ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡ ಯುವಕ | ಯುವತಿ ಅದೃಷ್ಟವಶಾತ್ ಪಾರು

Pinterest LinkedIn Tumblr

ಕುಂದಾಪುರ:  ನಿಶ್ಚಿತಾರ್ಥ ಆದ ಯುವತಿ ಕೆಲಸ ಮಾಡುತ್ತಿದ್ದ ಖಾಸಗಿ ವಾಣಿಜ್ಯ ಉದ್ಯಮ ಕಟ್ಟಡದ ಮಹಡಿ ಮೇಲೆ ಯುವತಿಗೆ ಇರಿದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಕೋಟ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಹೆಸ್ಕತ್ತೂರು ಆಟೋರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್ ( 35) ಯುವತಿಗೆ ಚೂರಿ ಇರಿದು ಹೆಸ್ಕತ್ತೂರು ಹಾರ್ಯಾಡಿಯ ಹಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ.

ರಾಘವೇಂದ್ರ ಕುಲಾಲ್ ಚೂರಿ ಇರಿದ ಯುವತಿಗೆ ಈ ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದು ಕೋಟ ಠಾಣೆಯಲ್ಲಿ ಈ ಹಿಂದೆ  ದೂರು ದಾಖಲಾಗಿತ್ತು. ಯುವಕನ ಠಾಣೆಗೆ ಕರೆಯಿಸಿ ಹಿಂಬರ ಪಡೆದು ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಅದೇ ದ್ವೇಷದ ಹಿನ್ನೆಲೆಯಲ್ಲಿ ಚೂರಿಯಲ್ಲಿ ಇರಿಯಲಾಗಿದೆ ಎನ್ನಲಾಗಿದೆ.

ಯುವತಿ ಮಧ್ಯಾಹ್ನ ತಾನು ಕೆಲಸ ಮಾಡುತ್ತಿದ್ದ ಕಟ್ಟಡದ ಮಹಡಿಗೆ ಊಟಕ್ಕೆ ಹೋದ ಸಂದರ್ಭ ರಾಘವೇಂದ್ರ ಪ್ರವೇಶಿಸಿ ಇರಿಯಲು ಮುಂದಾಗಿದ್ದು, ಹುಡುಗಿ ಕೈ ಅಡ್ಡ ಹಿಡಿದಿದ್ದರಿಂದ ಬಚಾವಾಗಿದ್ದಾಳೆ. ನಂತರ ರಾಘವೇಂದ್ರ ಅಲ್ಲಿಂದ ಪರಾರಿಯಾಗಿ ನೇಣಿಗೆ ಕೊರಳೊಡ್ಡಿದ್ದಾನೆ.

ಹಿಂದೆ ಕಲ್ಯಾಣಪುರ ಚಿತ್ರಮಂದಿರದಲ್ಲಿ ನಿಶ್ಚಿತಾರ್ಥ ಆದ ಯುವತಿಗೆ ಚೂರಿಯಿಂದ ಇರಿದಿದ್ದು, ಚೂರಿ ಇರಿತಕ್ಕೆ ಒಳಗಾದ ಯುವತಿ ಮತ್ತು ಯುವಕ ಇಬ್ಬರು ಮೃತಪಟ್ಟ ಘಟನೆ ಮಾಸುವ‌ ಮೊದಲೇ ಈ ಘಟನೆ ನಡೆದಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.