ಕರ್ನಾಟಕ

ಕೊಪ್ಪದಲ್ಲಿ ಅಗ್ನಿಶಾಮಕ ವಾಹನ ಬೈಕಿಗೆ ಡಿಕ್ಕಿ: ಮಹಿಳೆ ದಾರುಣ ಸಾವು

Pinterest LinkedIn Tumblr

ಚಿಕ್ಕಮಗಳೂರು: ಬೈಕಿನಲ್ಲಿ ಸಹಸವಾರೆಯಾಗಿ ತೆರಳುತ್ತಿದ್ದ ಮಹಿಳೆ ತಲೆ ಮೇಲೆ ಅಗ್ನಿಶಾಮಕ ವಾಹನ ಹರಿದು ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಮುಮ್ತಾಜ್​ (46) ಎಂದು ಗುರುತಿಸಲಾಗಿದೆ.

ಕೊಪ್ಪ ಪಟ್ಟಣದ ದ್ಯಾವೇಗೌಡ ವೃತ್ತದಿಂದ ವಾಟರ್ ಟ್ಯಾಂಕ್ ವೃತ್ತದ ಕಡೆಗೆ ಅಗ್ನಿ ಶಾಮಕದ ದಳ ವಾಹನ ಸಾಗುತ್ತಿತ್ತು. ಈ ವೇಳೆ ತಿರುವಿನಲ್ಲಿ ವಾಹನದ ಬೈಕ್​ಗೆ ಡಿಕ್ಕಿಯಾಗಿದೆ.

ಬೈಕ್​​ ಮತ್ತು ಅಗ್ನಿಶಾಮಕ ವಾಹನ ಅಪಘಾತವಾಗಿದ್ದು ಪರಿಣಾಮ ಬೈಕ್​ ಹಿಂಬದಿ ಕುಳಿತಿದ್ದ ಮಹಿಳೆ ಅಗ್ನಿಶಾಮಕ ವಾಹನದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಬೈಕ್​ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.