ಕರಾವಳಿ

ಪಿಎಫ್ಐ ಸಂಘಟಯಿಂದ ಗಲಭೆ ಸೃಷ್ಟಿಗೆ ಸಂಚು : ವಿಶ್ವ ಹಿಂದೂ ಪರಿಷತ್ ಆರೋಪ

Pinterest LinkedIn Tumblr

ಮಂಗಳೂರು:   ಪಿ ಎಫ್ ಐ ಸಂಘಟನೆ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಮಾಡಲು ಸಂಚು ರೂಪಿಸುತ್ತಿದೆ, ಅವರ ಯಾವುದೇ ಪ್ರತಿಭಟನೆಗೆ ಅವಕಾಶ ನೀಡಬೇಡಿ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಕಳೆದ ಹಲವಾರು ತಿಂಗಳುಗಳಿಂದ ಜಿಲ್ಲೆಯಲ್ಲಿ ಗೋಕಳ್ಳತನ, ಶ್ರದ್ಧಾ ಕೇಂದ್ರಗಳ ಅಪವಿತ್ರಗೊಳಿಸುವುದು, ಬಡ ಹಿಂದೂ ಮೀನು ಮಾರಾಟಗಾರರ ಮೇಲೆ ಹಲ್ಲೆ ನಡೆಸುವುದರ ಹಿಂದೆ PFI ಕೈವಾಡವಿದ್ದು ಮೊನ್ನೆ ಉಪ್ಪಿನಂಗಡಿಯಲ್ಲಿ ಪೊಲೀಸ್ ಠಾಣೆಗೆ ಪ್ರತಿಭಟನೆಯ ನೆಪದಲ್ಲಿ ಪೋಲೀಸರ ಮೇಲೆ ಹಲ್ಲೆ ನಡೆಸಿ ಪೊಲೀಸ್ ಠಾಣೆಯ ಮೇಲೆ ದಾಳಿನಡೆಸುವ ಉದ್ದೇಶದಿಂದ ದುಷ್ಕೃತ್ಯ ಎಸಗಿದ್ದಾರೆ.

ಜಿಲ್ಲೆಯಲ್ಲಿ ಮತೊಮ್ಮೆ ಹಿಂದೂಗಳ ಮೇಲೆ ದಾಳಿ ನಡೆಸಿ ಗಲಭೆ ಸೃಷ್ಟಿಸಲು ಸಂಚು ರೂಪಿಸುತ್ತಿದ್ದಾರೆ ಹಾಗಾಗಿ ಅವರ ಯಾವುದೇ ಪ್ರತಿಭಟನೆ,ಮೆರವಣಿಗೆ, ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದಾಗಿ ಜಿಲ್ಲಾಡಳಿತಕ್ಕೆ ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.