ಕರಾವಳಿ

ಮಂಗಳೂರು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದೂಕು ಮತ್ತು ಸ್ಪೋಟಕ ತಂದಿದ್ದ ಉಡುಪಿ ಹಾವಂಜೆಯ ವ್ಯಕ್ತಿ ಬಂಧನ

Pinterest LinkedIn Tumblr

ಮಂಗಳೂರು: ಮಂಗಳೂರು‌ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಬಂದೂಕು ಹಾಗೂ ಸ್ಪೋಟಕ ತಂದಿದ್ದ ವ್ಯಕ್ತಿಯನ್ನು ಪೊಲೀಸರು ಫಿಯಾಸ್ಟೋ ಕಾರು ಸಹಿತ ಶನಿವಾರ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿ ಉಡುಪಿಯ ಹಾವಂಜೆಯ ರೋನಿ ಡಿಸೋಜಾ (32) ಎಂದು ತಿಳಿದು ಬಂದಿದೆ.

ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಕ್ಯೂ.ಆರ್.ಟಿ ಕರ್ತವ್ಯದಲ್ಲಿದ್ದ ಸಿಐಎಸ್‍ಎಫ್ ಸಿಬ್ಬಂದಿಗಳು ಕಾರಿನೊಳಗೆ ಇಣುಕಿ ನೋಡಿದಾಗ ಸಿಂಗಲ್ ಬ್ಯಾರಲ್‍ ನ ಎರಡು ನಾಡ ಬಂದೂಕುಗಳು ಮತ್ತು ಸ್ಫೊಟಕಗಳು, ಚಾಕುಗಳು, ಮತ್ತಿತರ ಅಪಾಯಕಾರಿ ವಸ್ತುಗಳು ಪತ್ತೆಯಾಗಿದೆ. ಇವುಗಳ ಒಟ್ಟು ಮೌಲ್ಯ 2 ಲಕ್ಷ ರೂ. ಎನ್ನಲಾಗಿದೆ.

ಡಿಸಿಪಿಗಳಾದ ಹರಿರಾಂ ಶಂಕರ್, ಬಿ.ಪಿ ದಿನೇಶ್ ಕುಮಾರ್ ನಿರ್ದೇಶನದಲ್ಲಿ ಮಂಗಳೂರು ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಬಜ್ಪೆ ಠಾಣಾ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಹಾಗೂ ಸಿಬ್ಬಂದಿಗಳು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

Comments are closed.