ಕರಾವಳಿ

ಮಂಗಳೂರಿನಲ್ಲಿ ತಲವಾರು ಝಳಪಿಸಿ ದನ ಕಳವು ಮಾಡಿದ್ದ ಮೂವರು ಆರೋಪಿಗಳ ಬಂಧನ, ಸ್ಕಾರ್ಫಿಯೋ ವಶ

Pinterest LinkedIn Tumblr

ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮುಂಭಾಗದಲ್ಲಿ ಶುಕ್ರವಾರ ಮುಂಜಾನೆ 4.30ಕ್ಕೆ ಮಾರಕಾಸ್ತ್ರಗಳನ್ನು ಝಳಪಿಸಿ 3 ದನಗಳನ್ನು ಕದ್ದೊಯ್ದಿದ್ದ ಮೂವರು ದನ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳವು ಮಾಡಲು ಬಳಸಿದ ಕಪ್ಪು ಬಣ್ಣದ ಸ್ಕೋರ್ಪಿಯೋ ವಾಹನ ಕೆಎ 19 ಎಂಎ 5706 ಸಹಿತ ಆರೋಪಿಗಳಾದ ಮೊಹಮದ್ ಸಲೀಂ (32) , ಮೊಹಮದ್ ತಂಜಿಲ್ ((25) ಮೊಹಮದ್ ಇಕ್ಬಾಲ್ (23) ಎನ್ನುವವರನ್ನು ಬಂಧಿಸಿದ್ದಾರೆ.

ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಡಿಸಿಪಿ ಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್ ಮಾರ್ಗದರ್ಶನ, ಎಸಿಪಿ ಮಹೇಶ್ ಕುಮಾರ್ ಸಲಹೆಯಲ್ಲಿ ಮೂಡಬಿದಿರೆ ಮತ್ತು ಬಜ್ಪೆ ಠಾಣಾ ಸಿಬ್ಬಂದಿಗಳ ಸಹಕಾರದೊಂದಿಗೆ ನಡೆಸಲಾಗಿದೆ.

 

Comments are closed.