ಕರಾವಳಿ

ಮಂಗಳೂರಿನಲ್ಲಿ ತಂಡದಿಂದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ

Pinterest LinkedIn Tumblr

ಮಂಗಳೂರು: ಮಾರಕಾಸ್ತ್ರಗಳಿಂದ ತಂಡವೊಂದು ದಾಳಿ ನಡೆಸಿದ ಪರಿಣಾಮ ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಗೊಂಡ ಯುವಕ ಶ್ರವಣ್ ಎನ್ನಲಾಗಿದೆ.

ಎಂಟು ಜನರ ತಂಡವೊಂದು ಮಾರಾಕಾಸ್ತ್ರಗಳಿಂದ ಯುವಕನ ಮೇಲೆ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ತಂಡಗಳ ನಡುವಿನ ವೈಷಮ್ಯ ಮತ್ತು 2020ರಲ್ಲಿ ಬರ್ಕೆಯಲ್ಲಿ ನಡೆದ ಇಂದ್ರಜಿತ್ ಹತ್ಯೆ ಪ್ರಕರಣಕ್ಕೆ ಸೇಡು ತೀರಿಸಿಕೊಳ್ಳುವ ಪ್ರಯತ್ನವೇ ಗ್ಯಾಂಗ್‌ವಾರ್‌ಗೆ ಕಾರಣವಾಗಿದೆ.

ಅಳಕೆ ಗ್ಯಾಂಗ್‌ ಎಂಟು ಮಂದಿ ರೌಡಿಗಳು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದ ಗಾಯಗೊಂಡಿರುವಾತ ಅಂಕಿತ್ ಎಂಬಾತನ ಸ್ನೇಹಿತ. ಅಂಕಿತ್ ಇಂದ್ರಜಿತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಒಬ್ಬಾತನ ಸಹೋದರನಾಗಿದ್ದಾನೆ.

2020ರಲ್ಲಿ ನಡೆದಿದ್ದ ಇಂದ್ರಜಿತ್ ಕೊಲೆ ಕೃತ್ಯವನ್ನು ತಲವಾರ್ ಜಗ್ಗ ನೇತೃತ್ವದ ಬೋಳೂರು ಗ್ಯಾಂಗ್ ನಡೆಸಿತ್ತು. ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು 8 ಮಂದಿಯ ತಂಡವೊಂದು ಈ ದುಷ್ಕೃತ್ಯ ಎಸಗಿದೆ. ಗಾಯಾಳು ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರಂಭದಲ್ಲಿ ಇದೊಂದು ಕೊಲೆಯತ್ನ ಎಂದು ಭಾವಿಸಲಾಗಿತ್ತು. ಆದರೆ ಈಗ ಗ್ಯಾಂಗ್ ವಾರ್ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.

ಈ ಘಟನೆ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Comments are closed.