ಕರ್ನಾಟಕ

ದನಗಳ್ಳರನ್ನು ಹಿಡಿಯಲು ಹೋದ ಸಹೋದರರ ಮೇಲೆ ಪಿಕ್ಅಪ್ ವಾಹನ ಹತ್ತಿಸಿ ಹಲ್ಲೆ: ಗೃಹಸಚಿವರ ಭೇಟಿ, ಸೂಕ್ತ ಕ್ರಮದ ಭರವಸೆ

Pinterest LinkedIn Tumblr

ಶಿವಮೊಗ್ಗ: ಅಕ್ರಮವಾಗಿ ದನಗಳನ್ನು ಸಾಗಣೆ ಮಾಡುತ್ತಿರುವ ದನಗಳ್ಳರನ್ನು ತಡೆಯಲು ಯತ್ನಿಸಿದ ಇಬ್ಬರು ಯುವಕರ ಮೇಲೆ ಪಿಕ್ ಅಪ್ ವ್ಯಾನ್ ಹತ್ತಿಸಿದ ಪರಿಣಾಮ ಯುವಕರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಮೇಳಿಗೆಯಿಂದ ದನ ಸಾಗಾಟದ ವಾಹನ ಬೆನ್ನತ್ತಿದ ಮಾಡಿದ ಯುವಕರ ಮೇಲೆ ತೀರ್ಥಹಳ್ಳಿ ಬಳಿ ಬೆಜ್ಜವಳ್ಳಿಯಲ್ಲಿ ಪಿಕ್ ಅಪ್ ವಾಹನ ಹತ್ತಿಸಲಾಗಿದೆ. ಕುಡುಮಲ್ಲಿಗೆ ರೈಸ್ ಮಿಲ್ ಬಳಿಯೂ ಕೆಲವರ ಮೇಲೆ ಹತ್ತಿಸಿದ ಘಟನೆಯೂ ನಡೆದಿದೆ ಎಂದು ವರದಿಯಾಗಿದೆ.

ತೀರ್ಥಹಳ್ಳಿ ತಾಲೂಕಿನ ಕಿತ್ತನಗದ್ದೆ ನಿವಾಸಿಗಳಾದ
ಸಹೋದರರಾದ ಕಿರಣ್ (23), ಚರಣ್ (24) ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ನಡೆದ ಬಳಿಕ ಆಸ್ಪತ್ರೆಯ ಮುಂದೆ ನೂರಾರು ಜನ ಸೇರಿದ್ದರು.

ಅಕ್ರಮ ಗೋ ಸಾಗಣೆ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಇಬ್ಬರು ಯುವಕರ ಚಿಕಿತ್ಸೆಗೆ ಮಣಿಪಾಲದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

 

Comments are closed.