ಕರಾವಳಿ

ಕಾಸರಗೋಡು- ಕಾರಿನಲ್ಲಿ ಅಕ್ರಮವಾಗಿ 128 ಕಿಲೋ ಗಾಂಜಾ ಸಾಗಾಟ; ಓರ್ವನ ಬಂಧನ

Pinterest LinkedIn Tumblr

ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಸುಮಾರು 128 ಕಿಲೋ ಗಾಂಜಾವನ್ನು ಆದೂರು ಪೊಲೀಸರು ಮತ್ತು ನಾರ್ಕೋಟಿಕ್ ತಂಡ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಕಾಸರಗೋಡು ವಿದ್ಯಾನಗರದ ಝುಬೈರ್ ಬಂಧಿತ ಆರೋಪಿ.

ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ತಂಡವು ಆದೂರು ಸಮೀಪದಿಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಪ್ಯಾಕೆಟ್‌‌ಗಳಾಗಿ ಗಾಂಜಾವನ್ನು ಕಾಸರಗೋಡಿಗೆ ಸಾಗಾಟ ಮಾಡಲಾಗುತ್ತಿತ್ತು. ಆಂಧ್ರಪ್ರದೇಶದಿಂದ ಗಾಂಜಾವನ್ನು ಕಾಸರಗೋಡಿನ ವಿವಿದೆಡೆ ಸರಬರಾಜು ಮಾಡಲು ತರಲಾಗುತ್ತಿತ್ತು ಎನ್ನಲಾಗಿದೆ.

ಗುರುವಾರ ಸಂಜೆ ಕೂಡ ಮಂಗಳೂರು ಮೂಲಕ ಕಾಸರಗೋಡಿಗೆ ತರಲಾಗುತ್ತಿದ್ದ 114 ಕಿಲೋ ಗಾಂಜಾವನ್ನು ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದರು.

 

Comments are closed.