ಕರಾವಳಿ

ಸುಳ್ಳಿನ ಸಾಮ್ರಾಜ್ಯ ಶಾಶ್ವತವಲ್ಲ : ಬ್ಲಾಕ್ ಕಾಂಗ್ರೆಸ್‌ನ ಪ್ರಥಮ ಕಾರ್‍ಯಕಾರಿಣಿ ಸಭೆಯಲ್ಲಿ ಅಮೃತ್ ಶೆಣೈ

Pinterest LinkedIn Tumblr

ಮಂಗಳೂರು : ನಗರ ಬ್ಲಾಕ್ ಕಾಂಗ್ರೆಸ್‌ನ ಪ್ರಥಮ ಕಾರ್‍ಯಕಾರಿಣಿ ಸಭೆ ಮತ್ತು ಪದಾಧಿಕಾರಿಗಳ ನೇಮಕದ ಆದೇಶ ಪತ್ರ ನೀಡುವ ಕಾರ್‍ಯಕ್ರಮ ಪ್ರಕಾಶ್ ಬಿ. ಸಾಲ್ಯಾನ್ ನೇತೃತ್ವದಲ್ಲಿ ಕದ್ರಿ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಇತ್ತೀಚೆಗೆ ನಡೆಯಿತು.

ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ನೀಡುವ ಮೂಲಕ ಕಳೆದ ಏಳು ತಿಂಗಳಿನಿಂದ ಬ್ಲಾಕ್ ಕಾಂಗ್ರೆಸ್ ನಡೆಸಿರುವ ಜನಪರ ಕೆಲಸ ಕಾರ್‍ಯಗಳ ಬಗ್ಗೆ ಸಭೆಯಲ್ಲಿ ವರದಿ ವಾಚನ ನೀಡಲಾಯಿತು.

ಆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಉಡುಪಿಯ ಅಮೃತ್ ಶೆಣೈಯವರು ಮಾತನಾಡಿ ಅಡಳಿತ ಪಕ್ಷದ ನಾಯಕರು ಸುಳ್ಳು ಮತ್ತು ಅಪಪ್ರಚಾರವನ್ನು ಬಂಡವಾಳವನ್ನಾಗಿಸಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಸುಳ್ಳಿನಿಂದ ಕೂಡಿದ ಸಾಮ್ರಾಜ್ಯ ಎಂದಿಗೂ ಶಾಶ್ವತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೋ, ಮಾಜಿ ಮೇಯರ್ , ಮನಪಾ ಸದಸ್ಯ ಎಮ್. ಶಶಿಧರ್ ಹೆಗ್ಡೆ, ಮಹಮ್ಮದ್ ಕುಂಜತ್ತ್‌ಬೈಲ್, ರಜನೀಶ್ ಕಾಪಿಕಾಡ್, ಪದ್ಮನಾಭ ಅಮೀನ್, ರಘುರಾಜ್ ಕದ್ರಿ, ಚೇತನ್, ಯೋಗೀಶ್ ನಾಯಕ್, ಡಾ| ಬಿ.ಜಿ.ಸುವರ್ಣ, ರಾಕೇಶ್ ದೇವಾಡಿಗ, ತನ್ವಿರ್ ಶಾ, ಶಾಂತಳಾ ಗಟ್ಟಿ, ಸಂತೋಷ್ ಶೆಟ್ಟಿ, ಬ್ಲಾಕ್‌ಗೆ ಆಯ್ಕೆಗೊಂಡ ನೂತನ ಪದಾಧಿಕಾರಿಗಳು ಸೇರಿದಂತೆ ವಿವಿಧ ಘಟಕಗಳ ಮುಂಚೂಣಿ ನಾಯಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.