ಕರಾವಳಿ

ಸ್ಕಾರ್ಪಿಯೋ ವಾಹನದಲ್ಲಿ ಬಂದು ಜಾನುವಾರು ಕದ್ದೊಯ್ದ ದುಷ್ಕರ್ಮಿಗಳು | ಸೈಬರಕಟ್ಟೆ ಜಂಕ್ಷನ್ ಬಳಿ ಘಟನೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಕರಾವಳಿಯಲ್ಲಿ ಮತ್ತೆ ಗೋಕಳ್ಳರ ಅಟ್ಟಹಾಸ ಹೆಚ್ಚುತ್ತಿದೆ. ಐಷಾರಾಮಿ ಕಾರುಗಳಲ್ಲಿ ಬರುವ ಖದೀಮರು ರಸ್ತೆಯ ಬದಿಯಲ್ಲಿ ಮಲಗಿರುವ ಗೋವುಗಳನ್ನು ಕಳವು ಮಾಡಿಕೊಂಡು ಹೋಗುತ್ತಿದ್ದಾರೆ.

ಉಡುಪಿ ಜಿಲ್ಲೆಯ ಕೋಟ ಬಳಿಯ ಸಾಯಬ್ರಕಟ್ಟೆ ಎನ್ನುವಲ್ಲಿ ಕಳ್ಳರು ಗೋವುಗಳನ್ನು ಸ್ಕಾರ್ಪಿಯೋ ವಾಹನದಲ್ಲಿ ತುಂಬಿಸಿಕೊಂಡು ಕಳವು ಮಾಡಿದ ಘಟನೆ ವರದಿಯಾಗಿದೆ. ಗೋವುಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಸಾಗುವ ವೇಳೆಯಲ್ಲಿ ಇನ್ನೊಂದು ಗೋವು ವಾಹನವನ್ನು ಅಡ್ಡಗಟ್ಟುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳೆದ ಎರಡು ದಿನಗಳ ಹಿಂದೆ (ನ.9) ರಾತ್ರಿ ವೇಳೆ ನಡೆದಿರುವ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್‌ ಆಗಿದೆ. ಸಾಯಿಬ್ರಕಟ್ಟೆ ಜಂಕ್ಷನ್‌ ಬಳಿಯಲ್ಲಿ ರಾತ್ರಿ 11.20 ಸುಮಾರಿಗೆ ಸ್ಕಾರ್ಪಿಯೋ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ರಸ್ತೆಯ ಬದಿಯಲ್ಲಿ ಮಲಗಿದ್ದ ಗೋವುಗಳನ್ನು ಬಲವಂತವಾಗಿ ವಾಹನದಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ಗೋವುಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಹೋಗುವ ವೇಳೆಯಲ್ಲಿ ಹಸುವೊಂದು ವಾಹನವನ್ನು ಅಡ್ಡಗಟ್ಟಿದೆ. ಆದರೂ ಖದೀಮರು ವಾಹನ ಚಲಾಯಿಸಿಕೊಂಡು ಮುಂದಕ್ಕೆ ಸಾಗಿರುವುದು ದೃಶ್ಯಾವಳಿಯಲ್ಲಿ ಕಂಡುಬಂದಿದೆ.

ಈ ಬಗ್ಗೆ ಪೊಲೀಸರು ಸಿಸಿ‌ ಟಿವಿ ಪೂಟೇಜ್ ಪರಿಶೀಲಿಸಿದ್ದು ದುಷ್ಕರ್ಮಿಗಳ ಪತ್ತೆಗೆ ಬಲೆಬೀಸಿದ್ದಾರೆ.

Comments are closed.