ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಬೋಲ್ಡ್ ಅಭಿನಯದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಬೋಲ್ಡ್ ಆಗಿ ಉತ್ತರ ಕೊಟ್ಟಿದ್ದಾರೆ.

‘ಲವ್ ಯೂ ರಚ್ಚು’ ಸಿನಿಮಾದ ಮುದ್ದು ನೀನು ಎಂಬ ರೊಮ್ಯಾಂಟಿಕ್ ಹಾಡೊಂದರ ವಿಡಿಯೋ ಬಿಡುಗಡೆಯಾಗಿದ್ದು ಈ ಹಾಡಿನಲ್ಲಿ ರಚಿತಾ ಅವರು ನಾಯಕ ಅಜಯ್ ರಾವ್ ಜೊತೆ ಫಸ್ಟ್ ನೈಟ್ ದೃಶ್ಯದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ರಚಿತಾ ಉಪೇಂದ್ರ ಜೊತೆಗಿನ ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡು ಬಳಿಕ ಕಣ್ಣೀರು ಹಾಕಿ ಇನ್ಮುಂದೆ ಇಂತಹ ಪಾತ್ರ ಮಾಡಲ್ಲ ಎಂದಿದ್ದರು. ಆದರೆ ಈಗ ಇಂತಹ ಪಾತ್ರದಲ್ಲಿ ಮಾಡಲ್ಲ ಎಂದಿದ್ದ ರಚಿತಾ ಈ ಸಿನಿಮಾದಲ್ಲಿ ಮತ್ತೆ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ರಚಿತಾ ರಾಂ, ‘ಫಸ್ಟ್ ನೈಟ್ ಲ್ಲಿ ನೀವು ಏನು ಮಾಡ್ತೀರಾ? ಸಾಮಾನ್ಯವಾಗಿ ಎಲ್ಲರೂ ಫಸ್ಟ್ ನೈಟ್ ನಲ್ಲಿ ಏನು ಮಾಡ್ತೀರಿ? ಈ ಪ್ರಶ್ನೆ ಕೇಳುತ್ತಿರುವುದಕ್ಕೆ ಐ ಸಾರಿ. ಆದರೂ ಕೇಳುತ್ತಿದ್ದೇನೆ. ಎಲ್ಲರೂ ರೊಮ್ಯಾನ್ಸ್ ಮಾಡ್ತಾರಲ್ವಾ? ಅದನ್ನೇ ಇಲ್ಲಿ ಮಾಡಿದ್ದಾರಷ್ಟೇ. ಆ ರೀತಿ ಮಾಡಲ್ಲ ಎಂದು ಮಾಡಿದ್ದೇನೆ ಎಂದರೆ ಅದಕ್ಕೆ ಏನೋ ಕಾರಣವಿರಬೇಕು ಅಲ್ವಾ? ಅದನ್ನು ನೀವು ಸಿನಿಮಾ ನೋಡಿ ತಿಳಿದುಕೊಳ್ಳಬೇಕು’ ಎಂದು ರಚಿತಾ ಉತ್ತರಿಸಿದ್ದಾರೆ
Comments are closed.