ಕರಾವಳಿ

ಉಡುಪಿ ಜಿಲ್ಲೆ ಶಿರೂರು ಟೋಲ್ ಪ್ಲಾಝಾದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಗಡಿ ಭಾಗವಾದ ಶಿರೂರಿನ ಟೋಲ್ ಪ್ಲಾಝಾ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಬೈಂದೂರು ತಾಲೂಕು ದಂಡಾಧಿಕಾರಿ ಶೋಭಲಕ್ಷ್ಮೀ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆ. ನಾಡಿನ ಶ್ರೀಮಂತ ಕಲೆ ಸಾಹಿತ್ಯ ಪರಂಪರೆಯಿಂದ ಜಗತ್ತಿನಲ್ಲಿ ನಮ್ಮ ನಾಡಿಗೆ ವಿಶೇಷ ಶ್ರೇಷ್ಟತೆ ನೀಡಿದೆ.ಕನ್ನಡ ಮನಸ್ಸು ಒಗ್ಗೂಡಿ ನೆಲ ಜಲ ರಕ್ಷಣೆ ಮೂಲಕ ಕನ್ನಡ ಸೇವೆ ಮಾಡೋಣ ಎಂದರು.

ಮಾಜಿ ಜಿ.ಪಂ.ಸದಸ್ಯ ಸುರೇಶ ಬಟ್ವಾಡಿ, ಮಾಜಿ ತಾ.ಪಂ.ಸದಸ್ಯ ಪುಷ್ಪರಾಜ್ ಶೆಟ್ಡಿ,ಟೋಲ್ ವ್ಯವಸ್ಥಾಪಕ ಬೋಸ್ಲೆ, ದೇವರಾಜ್ ಮೇಸ್ತ, ದೀಪಕ್ ಶೆಟ್ಟಿ ಮುಂತಾದವರು ಹಾಜರಿದ್ದರು.

ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿ ಮಾಜಿ.ತಾ.ಪಂ.ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ವಂದಿಸಿದರು.

Comments are closed.