ಕರ್ನಾಟಕ

ಅಭಿಮಾನಿಗಳಿಗಾಗಿ ಪುನೀತ್ ‘ರಾಜಕುಮಾರ’ ಸಿನಿಮಾ ಮತ್ತೆ ರಿಲೀಸ್: ಉಚಿತ ಪ್ರದರ್ಶನ

Pinterest LinkedIn Tumblr

ಬೆಂಗಳೂರು: ಇತ್ತೀಚೆಗೆ ಮೃತಪಟ್ಟ ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಹಿನ್ನೆಲೆ ಅಪ್ಪು ನಟನೆಯ ‘ರಾಜಕುಮಾರ’ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಪುನೀತ್ ಅಭಿಮಾನಿಗಳಿಗಾಗಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದ್ದು, ಉಚಿತ ಪ್ರವೇಶ ನೀಡಲಾಗುವುದು ಎಂದು ಥಿಯೇಟರ್ ಮಾಲೀಕರು ಹೇಳಿದ್ದಾರೆ.

ಬೆಂಗಳೂರಿನ ಪದ್ಮನಾಭನಗರ ಬಳಿಯ ಗೌಡನಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಉಚಿತ ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿದೆ. ಇಂದು ಬೆಳಗ್ಗೆ 7.30ರಿಂದ ರಾಜಕುಮಾರ ಚಿತ್ರ ಪ್ರದರ್ಶನ ಆಗುತ್ತಿದೆ. ವಿಷಯ ತಿಳಿದು ಅಭಿಮಾನಿಗಳು ಸಹ ಚಿತ್ರಮಂದಿರದತ್ತ ಆಗಮಿಸುತ್ತಿದ್ದಾರೆ.

ಪುನೀತ್ ಅಭಿಮಾನಿಗಳಿಗೆ ಈ ಸಿನೆಮಾ ಪ್ರದರ್ಶನ ಮಾಡಲಾಗಿದೆ. ಬೆಳಿಗ್ಗೆ 7.30 ಕ್ಕೆ ಶೋ ಆರಂಭವಾಗಿದೆ. 630 ಅಭಿಮಾನಿಗಳಿಗೆ ಚಿತ್ರ ವೀಕ್ಷಣೆಗೆ ಅವಕಾಶ ಇದೆ. ಅಪ್ಪು ಅಭಿಯನಯದ ಎಲ್ಲಾ ಚಿತ್ರಗಳು ಇಲ್ಲಿ ತೆರೆಕಂಡಿವೆ. ಇವತ್ತು ಅಪ್ಪು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳಲು ಅಗತ್ತಿಲ್ಲ. ಸಾಕಷ್ಟು ಬಾರಿ ಈ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಅವರನ್ನ ಕಳೆದುಕೊಂಡು ಬಹಳ ನೋವಾಗಿದೆ ಎಂದು ಶ್ರೀನಿವಾಸ್ ಚಿತ್ರ ಮಂದಿರದ ಮ್ಯಾನೇಜರ್ ರವಿ

Comments are closed.