ತುಳುನಾಡು ಪರಶುರಾಮ ಸೃಷ್ಟಿಯ ನಾಡು . ಈ ತುಳುನಾಡಿನಲ್ಲಿ ಭೂತರಾಧನೆಗೆ ಮೊದಲ ಅದ್ಯತೆ . ವಿಶಿಷ್ಟಪೂರ್ಣವಾಗಿ ನಡೆಯುವ ದೈವಾರಾಧನೆಯಿಂದ ಇಲ್ಲಿನ ದೈವಿಕ ಶಕ್ತಿಗಳ ಕಾರ್ನಿಕ ಆಗಾಗ ನಮಗೆ ತಿಳಿದು ಬರುತ್ತದೆ.
ಹೌದು , ಅಕ್ಟೋಬರ್ -16ರಂದು ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ರಾತ್ರಿ ಶ್ರೀ ಬಬ್ಬು ಸ್ವಾಮಿಗೆ ಹೂವಿನ ಅಲಂಕಾರ ಪೂಜೆ ನಡೆಯುವ ಸಮಯದಲ್ಲಿ ಗಾಳಿ ಸಹಿತ ಜೋರಾಗಿ ಬಂದ ಮಳೆಗೆ ಶ್ರೀ ಕ್ಷೇತ್ರದ ರಾಹು ಗುಳಿಗ ದೈವದ ಪೀಠದಲ್ಲಿದ್ದ ನಂದಾದೀಪ ಉರಿಯುತ್ತಾ ದೀಪ ನಂದದೇ ಇರುವುದು ಆಶ್ಚರ್ಯ ಮೂಡಿಸಿತು. ಹೂವಿನ ಅಲಂಕಾರ ಪೂಜೆಗೆ ಬಂದ ಭಕ್ತರೊಬ್ಬರು ಈ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಇದೀಗ ಭಾರೀ ವೈರಲ್ ಆಗಿದೆ.

ಬಬ್ಬುಸ್ವಾಮಿ ಕ್ಷೇತ್ರ :
ಮಂಗಳೂರು ನಗರದಲ್ಲಿರುವ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಪ್ರತಿ ಶನಿವಾರ ಶ್ರೀ ಬಬ್ಬು ಸ್ವಾಮಿಗೆ ಹೂವಿನ ಅಲಂಕಾರ ಪೂಜೆ ನಡೆಯುತ್ತದೆ. ಮೊನ್ನೆ ಶನಿವಾರ ಸಿಡಿಲು ಗುಡುಗು ಮಿಂಚಿನ ಧಾರಾಕಾರ ಮಳೆ ಆಗಿದೆ. ಈ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕೂಡ ಕಠಿಣವಾಗಿತ್ತು. ಎಲ್ಲೆಡೆ ಕರ್ಗತ್ತಲು ಇದ್ದರೂ ದೈವಸ್ಥಾನದಲ್ಲಿ ಹೂವಿನ ಅಲಂಕಾರ ಪೂಜೆ ನಡೆಯುತ್ತಿತ್ತು.
ಈ ನಡುವೆ ಹೊರಗಿನ ದೈವದ ಪೀಠಗಳಲ್ಲಿಟ್ಟ ನಂದಾದೀಪ ಗಾಳಿ ಹಾಗೂ ಮಳೆಗೆ ಹಾರಿತ್ತು. ಆದರೆ , ರಾಹು ಗುಳಿಗ ಪೀಠದಲ್ಲಿರಿಸಿದ್ದ ನಂದಾದೀಪ ಮಾತ್ರ ಪ್ರಜ್ವಲಮಾನವಾಗಿ ಉರಿಯುತ್ತಿರುವುದನ್ನು ಕಂಡು ಭಗವತ್ ಭಕ್ತರು ಮೂಕಸ್ಮಿತರಾಗಿದ್ದರು.
ಭಗವಾನ್ ಬಬ್ಬು ಸ್ವಾಮಿ ಕ್ಷೇತ್ರಗಳಲ್ಲಿ ಶ್ರೀ ರಾಹು ಗುಳಿಗ ದೈವಕ್ಕೆ ಪ್ರಧಾನಸ್ಥಾನವಿದೆ. ಶ್ರೀ ಬಬ್ಬು ಸ್ವಾಮಿಗೆ ನೇಮೋತ್ಸವ ಆದ ಕೂಡಲೇ ರಾಹು ಗುಳಿಗ ದೈವಕ್ಕೆ ನೇಮೋತ್ಸವ ಇಲ್ಲಿ ನಡೆಯುತ್ತದೆ . ಹಾಗಾಗಿ ರಾಹು ಗುಳಿಗ ದೈವ ಹೆಚ್ಚು ಕಾರ್ನಿಕವನ್ನು ಹೊಂದಿದೆ.
ಕೆಲವರು ಇದು ಈ ಕ್ಷೇತ್ರದಲ್ಲಿ ನೆಲೆ ನಿಂತ ಶ್ರೀ ಬಬ್ಬು ಸ್ವಾಮಿಯ ಕಾರ್ನಿಕದ ಒಂದು ದೃಷ್ಟಾಂತ ಎನ್ನುತ್ತಾರೆ . ಅತಿ ಪುರಾತನ ಕೋರ್ದಬ್ಬು ದೈವಸ್ಥಾನ ಇದಾಗಿದ್ದು ಇಲ್ಲಿ ಶ್ರೀ ಬಬ್ಬುಸ್ವಾಮಿ ಅನಾದಿ ಕಾಲದಲ್ಲಿ ನೆಲೆಯಾಗಿದ್ದು , ಇಂತಹ ಪುಣ್ಯಕ್ಷೇತ್ರದಲ್ಲಿ ಶನಿವಾರ ಹೂವಿನ ಅಲಂಕಾರ ಪೂಜೆಯ ಸಂದರ್ಭದಲ್ಲಿ ನಡೆದ ಈ ವಿಶೇಷ ಕಾರ್ನಿಕದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಲವಾರು ರಾಹು ಗುಳಿಗ ದೈವದ ಮಹಿಮೆ ಸಾರುವ ಗೀತೆಗಳ ತುಣುಕನ್ನು ಈ ದೃಶ್ಯಕ್ಕೆ ಜೋಡಣೆ ಮಾಡಿ ತಮ್ಮ ಭಕ್ತಿಯನ್ನು ಪ್ರಚುರಪಡಿಸುತ್ತಿದ್ದಾರೆ .ಈ ಬಗ್ಗೆ ಮಾಹಿತಿಯನ್ನು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಎಸ್.ಜಗದೀಶ್ಚಂದ್ರ ಅಂಚನ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
■ ಎಸ್ ಜಗದೀಶ್ಚಂದ್ರ ಅಂಚನ್ , ಸೂಟರ್ ಪೇಟೆ
Comments are closed.