ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದ ಮೂಡುಶೆಡ್ಡೆಯಲ್ಲಿ ಬುಧವಾರ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ನಡೆದ ಹಲ್ಲೆಯ ಪ್ರತೀಕಾರಕ್ಕಾಗಿ ರೌಡಿಶೀಟರ್ಗಳ ತಂಡ ತಲವಾರು ತೋರಿಸಿ ಕೊಲೆ ಬೆದರಿಕೆ ಒಡ್ಡಿದ ಘಟನೆ ಗುರುವಾರ ಸಂಜೆ ನಡೆದಿದೆ.

ರಿಝ್ವಾನ್ ನೇತೃತ್ವದ ತಂಡವು ಕೊಲೆ ಬೆದರಿಕೆವೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಇವರು ಕೆಲವು ವರ್ಷಗಳ ಹಿಂದೆ ನಡೆದಿದ್ದ ವಾಮಂಜೂರು ಚರಣ್ ಕೊಲೆ ಪ್ರಕರಣದ ಆರೋಪಿಗಳು ಎನ್ನಲಾಗಿದೆ. ಇವರ ವಿರುದ್ಧ ರೌಡಿಶೀಟರ್ ಪಟ್ಟಿ ತೆರೆಯಲಾಗಿತ್ತು.
ಅ.6ರಂದು ರಾತ್ರಿ 10:15ರ ಸುಮಾರಿಗೆ ಮೂಡುಶೆಡ್ಡೆಯ ಪಿಲಿಕುಳ ನಿಸರ್ಗಧಾಮ ಸಮೀಪ ಮಹಮ್ಮದ್ ಅಶ್ಪರ್ ಹೆಸರಿನ ಯುವಕ ಅಂಗಡಿಯೊಂದರ ಬಳಿ ನಿಂತುಕೊಂಡಿದ್ದ. ಈ ವೇಳೆ ನಾಲ್ವರು ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅವರು ಹಾರ್ನ್ ಹಾಕಿದ್ದನ್ನು ಅಶ್ಪರ್ ಪ್ರಶ್ನಿಸಿದ್ದ. ಕೆಲಹೊತ್ತಿನ ಬಳಿಕ ಆಟೊರಿಕ್ಷಾದಲ್ಲಿ ವಾಪಸಾದ ನಾಲ್ವರಿದ್ದ ದುಷ್ಕರ್ಮಿಗಳು ಅಶ್ಪರ್ಗೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ.
ಮರುದಿನ ಸಂಜೆಗೆ (ಅ.7) ಅದೇ ಮೂಡುಶೆಡ್ಡೆಯಲ್ಲಿ ಬುಧವಾರ ರಾತ್ರಿ ಮಹಮ್ಮದ್ ಅಶ್ಪರ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಿಗೆ ರಿಝ್ವಿನ್ ನೇತೃತ್ವದ ತಂಡ ತಲವಾರು ತೋರಿಸಿ ಕೊಲೆ ಬೆದರಿಕೆ ಹಾಕಿದೆ.
Comments are closed.