ಕರ್ನಾಟಕ

ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್..!

Pinterest LinkedIn Tumblr

ಬೆಂಗಳೂರು: ಪ್ರಸ್ತುತ ರೈಲ್ವೆ ಪೊಲೀಸ್ ಎಡಿಜಿಪಿ ಆಗಿರುವ ಭಾಸ್ಕರ್ ರಾವ್ ಅವರು ತಮ್ಮ ಸುದೀರ್ಘ ವರ್ಷಗಳ ಪೊಲೀಸ್ ಇಲಾಖೆಯ ಸೇವೆಯಿಂದ ಸ್ವಯಂ ನಿವೃತ್ತಿ ಬಯಸಿ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

‘ವೈಯಕ್ತಿಕ ಕಾರಣದಿಂದ ಸ್ವಯಂನಿವೃತ್ತಿ ಪಡೆಯುತ್ತಿದ್ದೇನೆ. ನನ್ನ ಅರ್ಜಿ ಪರಿಗಣಿಸಬೇಕು’ ಎಂದು ಕೋರಿರುವ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಅರ್ಜಿ ನೀಡಿರುವುದಾಗಿ ಆಪ್ತ ಮೂಲಗಳು ಹೇಳಿವೆ.

ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ ಪಡೆದಿದ್ದ ಭಾಸ್ಕರ್ ರಾವ್ , 1990ನೇ ಐಪಿಎಸ್ ಬ್ಯಾಚ್ ಅಧಿಕಾರಿ ಆಗಿ ಸೇವೆ ಆರಂಭಿಸಿದ್ದರು. ಕಳೆದ ವರ್ಷ ಕೊರೋನಾ ಮೊದಲನೇ ಅಲೆ ಸಂದರ್ಭ ಬೆಂಗಳೂರು ಪೊಲೀಸ್ ಕಮಿಷನರ್ ಆಗಿಯೂ ಕೆಲಸ ಮಾಡಿದ್ದರು. ಭಾಸ್ಕರ್ ರಾವ್ ಅವರು ಪ್ರಸ್ತುತ ರೈಲ್ವೆ ಪೊಲೀಸ್ ವಿಭಾಗದ ಎಡಿಜಿಪಿ ಆಗಿದ್ದಾರೆ.

 

Comments are closed.