ಬೆಂಗಳೂರು: ಕನ್ನಡದ ಸ್ಟಾರ್ ಆ್ಯಂಕರ್ ಅನುಶ್ರೀ ಡ್ರಗ್ಸ್ ಕೇಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಯಾರ ಮೇಲೂ ಸಾಫ್ಟ್ ಕಾರ್ನರ್ ತೋರಿಸುವುದಿಲ್ಲ ಎಂದಿದ್ದಾರೆ.

ಎಫ್‌ಎಸ್‌ಎಲ್ ವರದಿ ಬಂದಿರುವುದು ಗೊತ್ತಿದೆ. ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುವುದು.ಈ ಪ್ರಕರಣದಲ್ಲಿ ಯಾವ ರಾಜಕೀಯ ಒತ್ತಡವೂ ಇಲ್ಲ. ಡ್ರಗ್ಸ್ ಕೇಸ್ ಪ್ರಕರಣಗಳಲ್ಲಿ ಯಾರೂ ಒತ್ತಡ ಹಾಕುವುದು ಇಲ್ಲ. ಡ್ರಗ್ಸ್ ಕೇಸ್‌ನಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಅಪರಾಧಿಗಳು ಯಾರೇ ಆಗಿದ್ದರೂ, ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸರ ಮೇಲೆ ಒತ್ತಡ ಇರುವುದು ಸತ್ಯಕ್ಕೆ ದೂರವಾದ ವಿಚಾರ. ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅನುಶ್ರೀ ಹೆಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖ….
ಡ್ರಗ್ಸ್ ಕೇಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ಶೀಟ್ನಲ್ಲಿ ಎರಡನೇ ಆರೋಪಿ (ಎ2) ಕಿಶೋರ್ ಶೆಟ್ಟಿಯ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ‘ರಿಯಾಲಿಟಿ ಶೋನ ಕೊರಿಯೋಗ್ರಾಫರ್ ಆಗಿದ್ದ ತರುಣ್ ಮುಖಾಂತರ ತನಗೆ ಅನುಶ್ರೀ ಪರಿಚಯವಾಗಿತ್ತು. ತರುಣ್ ರೂಮ್ನಲ್ಲಿ ತಡರಾತ್ರಿವರೆಗೂ ಅನುಶ್ರೀಗೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಸುತ್ತಿದ್ದೆವು. ಡ್ಯಾನ್ಸ್ ಪ್ರಾಕ್ಟೀಸ್ಗೆ ಬರುವಾಗ ಅನುಶ್ರೀ ಡ್ರಗ್ಸ್ ಖರೀದಿಸಿ ತರುತ್ತಿದ್ದರು. ನಮಗೆ ಎಕ್ಸ್‌ಟಸಿ ಡ್ರಗ್ಸ್ ನೀಡಿ ಅನುಶ್ರೀ ಕೂಡ ಸೇವಿಸುತ್ತಿದ್ದರು. ಅನುಶ್ರೀಗೆ ಡ್ರಗ್ಸ್ ಪೆಡ್ಲರ್ಗಳ ಪರಿಚಯವಿದೆ. ಡ್ರಗ್ಸ್ ಎಲ್ಲಿ ಸಿಗುತ್ತೆ, ಯಾರು ಪೂರೈಸುತ್ತಾರೆಂದು ಆಕೆಗೆ ಗೊತ್ತಿತ್ತು. ಡ್ರಗ್ಸ್ ಅಷ್ಟು ಸುಲಭವಾಗಿ ಅನುಶ್ರೀಗೆ ಹೇಗೆ ಸಿಗುತ್ತಿತ್ತೆಂಬ ಮಾಹಿತಿಯಿಲ್ಲ.ಡ್ಯಾನ್ಸ್ ಮಾಡುವಾಗ ಸುಸ್ತಾಗಬಾರದೆಂದು ಸೇವಿಸುತ್ತಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಎ2 ಆರೋಪಿ ಕಿಶೋರ್ ಶೆಟ್ಟಿ ಹೇಳಿಕೆಯನ್ನು ದಾಖಲಿಸಲಾಗಿದೆ.
Comments are closed.