ಉಡುಪಿ: ಕರಾವಳಿ ಭಾಗದ ಕ್ರೈಸ್ತರ ವಿಶೇಷ ಹಬ್ಬ, ಮೇರಿ ಮಾತೆಯ ಜನ್ಮ ದಿನವಾದ ಮೊಂತಿ ಹಬ್ಬ ಅಥವಾ ತೆನೆ ಹಬ್ಬವನ್ನು ಇಂದು (ಸೆ.8 ಬುಧವಾರ) ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

9 ದಿನಗಳ ನವೇನಾ ಪ್ರಾರ್ಥನೆಯ ಬಳಿಕ ಮಾತೆ ಮೇರಿಯ ಜನ್ಮ ದಿನವಾದ ಮೊಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ.
ಕೊರೊನಾ ಹಿನ್ನೆಲೆ ಕಳೆದ ವರ್ಷದಂತೆ ಈ ವರ್ಷವೂ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲಾಗಿದ್ದು, ಚರ್ಚ್ನ ಒಳಗೆ ಸೀಮಿತ ಸಂಖ್ಯೆಯ ಜನರಿಗೆ ಮಾತ್ರವೇ ಪ್ರವೇಶ ನೀಡಲಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು.
ಕೊರೊನಾ ಹಿನ್ನೆಲೆ, ಮಕ್ಕಳಿಂದ ಮೆರವಣಿಗೆ, ಹೂವಿನ ಅರ್ಪಣೆ ಸಹಿತ ಎಲ್ಲಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿತ್ತು. ಮೇರಿ ಮಾತೆಗೆ ಪ್ರತ್ಯೇಕವಾಗಿ ಹೂವುಗಳನ್ನು ಅರ್ಪಿಸಲು ಸೀಮಿತ ಸಂಖ್ಯೆಯ ಜನರಿಗೆ ಮಾತ್ರವೇ ಅವಕಾಶ ನೀಡಲಾಗಿತ್ತು.
ಈ ಸಂದರ್ಭ ಚರ್ಚ್ನಲ್ಲಿ ಆಶೀರ್ವಚಿಸಿ ನೀಡಿದ ಹೊಸ ತೆನೆಯನ್ನು ಮನೆಗೆ ತಂದು ಹೊಸ ಅಕ್ಕಿಯ ಊಟವನ್ನು ಮಾಡಲಾಗುತ್ತದೆ.
Comments are closed.