ಬೆಂಗಳೂರು: ಗ್ಯಾಸ್ ಗೀಸರ್ ಆನ್ ಮಾಡಿಕೊಂಡು ಸ್ನಾನ ಮಾಡುತ್ತಿದ್ದ ಸಂಪದಾ ಎಂಬುವರು ಉಸಿರುಗಟ್ಟಿ ಸ್ನಾನದ ಕೊಠಡಿಯಲ್ಲೇ ಮೃತಪಟ್ಟಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಈ ಅವಘಡ ಸಂಭವಿಸಿದೆ.

23 ವರ್ಷ ಪ್ರಾಯದ ಎಂಬಿಬಿಎಸ್ ವಿದ್ಯಾರ್ಥಿನಿ ಸಂಪದಾ, ಸೆಪ್ಟೆಂಬರ್ 4ರಂದು ಸ್ನಾನಕ್ಕೆ ಹೋಗಿದ್ದರು. ಗ್ಯಾಸ್ ಗೀಸರ್ ಆನ್ ಮಾಡಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡುತ್ತಿದ್ದರು. ಅದೇ ಸಂದರ್ಭದಲ್ಲೇ ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿದೆ. ಸ್ನಾನದ ಕೊಠಡಿಯಲ್ಲೇ ಉಸಿರುಗಟ್ಟಿ ಸಂಪದಾ ಮೃತಪಟ್ಟಿದ್ದಾರೆ. ಬಹಳ ಸಮಯವಾದರೂ ಕೊಠಡಿಯಿಂದ ಹೊರಬರದಿದ್ದಾಗ ಸ್ನೇಹಿತೆಯರು ಆತಂಕಗೊಂಡಿದ್ದರು. ಕೊಠಡಿ ಬಾಗಿಲಿನ ಬೀಗ ಮುರಿದು ಒಳ ನೋಡಿದಾಗಲೇ ವಿಷಯ ಗೊತ್ತಾಗಿದೆ ಎಂದೂ ತಿಳಿಸಿದರು.
ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ ಅಷ್ಟರಲ್ಲಾಗಲೇ ಸಂಪದ ಮೃತಪಟ್ಟಿದ್ದಾರೆ.
Comments are closed.