ಕರಾವಳಿ

ಮೊದಲ ಬಾರಿ ಸಚಿವರಾದವರಿಗೆ ಬಂಪರ್: ಸುನೀಲ್ ಕುಮಾರ್’ಗೆ ಇಂಧನ, ಅರಗ ಜ್ಞಾನೇಂದ್ರ- ಗೃಹಖಾತೆ; ಉಳಿದ ಸಚಿವರ ಖಾತೆ ವಿವರವಿಲ್ಲಿದೆ

Pinterest LinkedIn Tumblr

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಮೊದಲ ಬಾರಿಗೆ ರಾಜ್ಯ ಸಂಪುಟದಲ್ಲಿ ಸ್ಥಾನ ಪಡೆದಿರುವ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ನೀಡಲಾಗಿದೆ. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ನೀಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಣಕಾಸು, ಡಿಪಿಎಆರ್, ಗೃಹ ಖಾತೆಯ ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ ಮತ್ತು ಹಂಚಿಕೆಯಾಗದ ಇತರೆ ಎಲ್ಲ ಖಾತೆಗಳನ್ನು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ.

ಸಚಿವರಿಗೆ ಖಾತೆ ಹಂಚಿಕೆ….
ಉಮೇಶ್​ ಕತ್ತಿ- ಅರಣ್ಯ, ಆಹಾರ
ಎಸ್. ಅಂಗಾರ- ಮೀನುಗಾರಿಕೆ
ಜೆ.ಸಿ. ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರ
ಅರಗ ಜ್ಞಾನೇಂದ್ರ- ಗೃಹ ಇಲಾಖೆ
ಡಾ. ಅಶ್ವತ್ಥ ನಾರಾಯಣ- ಉನ್ನತ ಶಿಕ್ಷಣ, ಐಟಿಬಿಟಿ
ಆನಂದ್​ ಸಿಂಗ್- ಪರಿಸರ, ಪ್ರವಾಸೋದ್ಯಮ
ಸಿಸಿ ಪಾಟೀಲ್- ಲೋಕೋಪಯೋಗಿ ಇಲಾಖೆ
ಕೋಟ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ, ಹಿಂದುಳಿದ ವರ್ಗ
ಪ್ರಭು ಚೌಹಾಣ್​- ಪಶು ಸಂಗೋಪನೆ
ಮುರುಗೇಶ್ ನಿರಾಣಿ- ಬೃಹತ್ ಕೈಗಾರಿಕೆ
ಶಿವರಾಮ್ ಹೆಬ್ಬಾರ್​- ಕಾರ್ಮಿಕ ಖಾತೆ
ಎಸ್.ಟಿ. ಸೋಮಶೇಖರ್- ಸಹಕಾರ ಖಾತೆ
ಬಿ.ಸಿ. ಪಾಟೀಲ್- ಕೃಷಿ ಖಾತೆ
ಭೈರತಿ ಬಸವರಾಜ್- ನಗರಾಭಿವೃದ್ಧಿ
ಡಾ.ಕೆ. ಸುಧಾಕರ್- ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ
ಗೋಪಾಲಯ್ಯ- ಅಬಕಾರಿ ಖಾತೆ
ಶಶಿಕಲಾ ಜೊಲ್ಲೆ- ಮುಜರಾಯಿ, ಹಜ್​, ವಕ್ಫ್​ ಖಾತೆ
ಎಂಟಿಬಿ ನಾಗರಾಜ್​- ಪೌರಾಡಳಿ ಖಾತೆ
ನಾರಾಯಣಗೌಡ- ರೇಷ್ಮೆ, ಕ್ರೀಡೆ, ಯುವ ಸಬಲೀಕರಣ
ಬಿ.ಸಿ. ನಾಗೇಶ್- ಶಿಕ್ಷಣ ಇಲಾಖೆ
ಸುನೀಲ್​ ಕುಮಾರ್ – ಇಂಧನ, ಕನ್ನಡ- ಸಂಸ್ಕೃತಿ ಇಲಾಖೆ
ಶ್ರೀರಾಮುಲು- ಸಾರಿಗೆ ಖಾತೆ, ಪರಿಶಿಷ್ಟ ಜಾತೆ ಸಚಿವಾಲಯ
ಆರ್. ಅಶೋಕ್ – ಕಂದಾಯ ಇಲಾಖೆ
ವಿ. ಸೋಮಣ್ಣ- ವಸತಿ, ಮೂಲಭೂತ ಅಭಿವೃದ್ಧಿ ಖಾತೆ
ಕೆ.ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ
ಹಾಲಪ್ಪ ಆಚಾರ್- ಗಣಿ, ಭೂ ವಿಜ್ಞಾನ, ಮಹಿಳಾ- ಮಕ್ಕಳ ಕಲ್ಯಾಣ
ಶಂಕರ ಪಾಟೀಲ್ ಮುನೇನಕೊಪ್ಪ- ಜವಳಿ, ಸಕ್ಕರೆ ಖಾತೆ
ಮುನಿರತ್ನ- ತೋಟಗಾರಿಕೆ ಖಾತೆ, ಯೋಜನೆ, ಅಲ್ಪಸಂಖ್ಯಾತ ಕಲ್ಯಾಣ, ಸಾಂಖಿಕ
ಗೋವಿಂದ ಕಾರಜೋಳ- ಜಲಸಂಪನ್ಮೂಲ ಖಾತೆ

Comments are closed.