ಕರಾವಳಿ

ಫೈನಾನ್ಸಿಯರ್ ಅಜೇಂದ್ರ ಶೆಟ್ಟಿ ಕೊಲೆ ಕೇಸ್: ಆರೋಪಿ‌ ಅನೂಪ್ ಶೆಟ್ಟಿಗೆ 14 ದಿನ ನ್ಯಾಯಾಂಗ ಬಂಧನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರ-ಅಸೋಡು ಎಂಬಲ್ಲಿ‌ನ‌ ಡ್ರೀಮ್ ಫೈನಾನ್ಸ್ ಸಂಸ್ಥೆಯ ಮಾಲಿಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಡ್ರೀಮ್ ಸಂಸ್ಥೆಯ ಪಾಲುದಾರ ಅನೂಪ್‌ ಶೆಟ್ಟಿಗೆ ಆ.19ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

(ಆರೋಪಿ ಅನೂಪ್)

ಅಜೇಂದ್ರ ಶೆಟ್ಟಿ ಕೊಲೆ ಕೇಸಿಗೆ ಸಂಬಂದಿಸಿದಂತೆ ಪೊಲೀಸರು ಇತ್ತೀಚೆಗೆ ಅನೂಪ್ ಶೆಟ್ಟಿ ಯನ್ನು ಗೋವಾದಲ್ಲಿ ಬಂಧಿಸಿದ್ದು ಕುಂದಾಪುರಕ್ಕೆ ಕರೆತಂದಿದ್ದರು. ಆದರೆ ತನಿಖೆಯ ಹಿನ್ನೆಲೆ ಆರೋಪಿ‌ ಪೊಲೀಸ್ ಅಭಿರಕ್ಷೆಗೆ (ಕಸ್ಟಡಿಗೆ) ಬೇಕಿದ್ದ ಹಿನ್ನೆಲೆ ಕಳೆದ ಸೋಮವಾರ ಕುಂದಾಪುರ 1ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಾರಗಳ ಕಾಲ ಪೊಲೀಸ್ ಕೇಳಿದ್ದು ಪ್ರಾಸಿಕ್ಯೂಶನ್ ವಾದ ಆಲಿಸಿದ ನ್ಯಾಯಾಧೀಶರು ಜ.9 ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದರು. ಪೊಲೀಸರು ಆರೋಪಿಯನ್ನು ಗೋವಾಕ್ಕೆ ಕರೆದೊಯ್ದು ಅಲ್ಲಿನ ಹೆಚ್ವುವರಿ ತನಿಖೆ ಪೂರ್ಣಗೊಳಿಸಿದ್ದರು ಮಾತ್ರವಲ್ಲದೆ ಕೃತ್ಯ ಸ್ಥಳದಲ್ಲಿನ ಮಹಜರು ಸೇರಿದಂತೆ ವಿವಿಧ ಆಯಾಮದ ತನಿಖೆ ನಡೆಸಿದ್ದರು. ಪೊಲೀಸ್ ಕಸ್ಟಡಿ ಅವಧಿ ಮುಗಿಯಲು‌ ಇನ್ನೂ ಮೂರು ದಿನ ಬಾಕಿಯಿದ್ದರೂ ಕೂಡ ತನಿಖೆ ಹಂತ ಪೂರ್ಣವಾದ ಹಿನ್ನೆಲೆ ಮತ್ತೆ ನ್ಯಾಯಾಲಯಲ್ಲೆ ಹಾಜರು ಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

(ಕೊಲೆಯಾದ ಅಜೇಂದ್ರ ಶೆಟ್ಟಿ)

ಘಟನೆ ಹಿನ್ನೆಲೆ…
ಅಜೇಂದ್ರ ಅವರ ಇತ್ತೀಚಿನ‌ ಬೆಳವಣಿಗೆಯನ್ನು ಸಹಿಸಲಾಗದೆ ಆರೋಪಿ‌ ಅನೂಪ್‌ ಈ‌ ಕೃತ್ಯ ಎಸಗಿದ್ದ. ಇತ್ತೀಚೆಗಷ್ಟೇ ತಮ್ಮ‌ ಕಾರು ಅಪಘಾತಕ್ಕೀಡಾದ ಬಳಿಕ ಹೊಸ ಕಾರನ್ನು ಖರೀದಿಸಿದ್ದು ಮಾತ್ರವಲ್ಲದೇ ಬ್ಯಾಂಕ್‌ ಸಾಲದ ನೆರವಿನಿಂದ ತಮ್ಮ‌ ಸಹೋದರನಿಗೆ ಟಿಪ್ಪರ್ ಖರೀದಿಸಿ ಕೊಟ್ಟಿದ್ದರು.‌ ಇದೆಲ್ಲವೂ ಅನೂಪ್ ಕಣ್ಣುಕುಕ್ಕಿತ್ತು. ಅಜೇಂದ್ರ ಫೈನಾನ್ಸ್ ಜೊತೆ ಹೊಸ ಚೀಟಿ ವ್ಯವಹಾರವೊಂದನ್ನು ಪ್ರಾರಂಭಿಸಿದ್ದು, ಇದರಲ್ಲಿ ಅನೂಪ್ ತನಗೂ ಪಾಲು ಕೊಡಬೇಕೆಂದು ಕೇಳಿಕೊಂಡಿದ್ದನು. ಇದಕ್ಕೆ ಅಜೇಂದ್ರ ಪಾಲು ಕೊಡಲು ನಿರಾಕರಿಸಿದ್ದು ಮತ್ತಷ್ಟು ಕುಪಿತಗೊಂಡ ಅನೂಪ್ ಜುಲೈ 30 ಶುಕ್ರವಾರದಂದು ಪೈನಾನ್ಸ್ ಕಚೇರಿಯಲ್ಲೇ ಮಾರಕ ಅಸ್ತ್ರದಿಂದ ಕತ್ತು ಸೀಳಿ ಅಜೇಂದ್ರನನ್ನು ಕೊಂದು ಮುಗಿಸಿದ್ದ.

 

Comments are closed.