ಕರಾವಳಿ

ಅಮಾಸೆಬೈಲಿನಲ್ಲಿ ಬಂದೂಕು, ಗುಂಡುಗಳ ಸಹಿತ ವನ್ಯಜೀವಿಗಳ ಬೇಟೆಗೆ ಬಂದ ನಾಲ್ವರು ಬೇಟೆಗಾರರ ಬಂಧನ

Pinterest LinkedIn Tumblr

ಉಡುಪಿ: ಬಂದೂಕು ದಾರಿಗಳಾಗಿ ಆಗಮಿಸಿ ಪರಿಸರವನ್ನು ನಾಲ್ವರು ಬೇಟೆಗಾರರು ಬೆಚ್ಚಿ ಬೀಳಿಸಿದ ಘಟನೆ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಶೆಡಿ ಮನೆಗ್ರಾಮದ ಅಮಾಸೆಬೈಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಸಮ್ಮನಕಾನು ತೋಟದ ಮನೆ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬೇಟೆಗೆಂದು ಬಂದ ಕಾರ್ಕಳ ಮೂಲದ ಆರೋಪಿಗಳಾದ ಸ್ಟಾನಿ ಸ್ಲೆವೀಸ್ ಪಾಯಸ್(50), ಕಾರ್ಕಳ ಆನೆಕೆರೆಯ ಮೋಹನ (46), ಕುಕ್ಕುಂದೂರು ಗ್ರಾಮದ ಮೇಲ್ವಿನ್ ಪ್ರಾಕ್ಸಿ ಡಿಸೋಜ(38), ಹೆಬ್ರಿ ಜೆಡ್ಡೋಳಿ ಅಕ್ಷಯ ಪೂಜಾರಿ (23) ಇವರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶೇಡಿಮನೆ ಗ್ರಾಮದ ಅರಸಿನಖಾನ್ ತೋಟದಮನೆ ವಾಸಿ ಸುಕುಮಾರ ಶೆಟ್ಟಿಯವರ ಮನೆಹತ್ತಿರ ತಡರಾತ್ರಿ ಏಕಾಏಕಿ ಬಂದೂಕಿನ ಗುಂಡಿನ ಶಬ್ದ ಕೇಳಿದ್ದು ಎಚ್ಚೆತ್ತ ಮನೆಯವರು ಹೊರಗೆ ಬಂದು ನೋಡಿದಾಗ ಅಲ್ಲಿ ನಾಲ್ವರು ಆಗಂತುಕರ ಸಂಚಾರ ಕಂಡು ಬಂದಿದೆ. ಈ ಪ್ರದೇಶ ನಕ್ಸಲ್ ಸೂಕ್ಷ್ಮ ಪ್ರದೇಶವಾದ್ದರಿಂದ ಸಹಜವಾಗಿ ಮನೆಯವರು ಆರಂಭದಲ್ಲಿ ಬೆದರಿಹೋಗಿದ್ದಾರೆ.ಆದರೆ ನಂತರ ಅವರನ್ನು ವಿಚಾರಿಸಿದಾಗ ಆರೋಪಿಗಳು ಕೋವಿಸಹಿತ ಬೇಟೆಗೆ ಬಂದಿರುವ ವಿಚಾರ ತಿಳಿದು ಬಂದಿದೆ. ಅವರ ಬಳಿ ಡಿಬಿಬಿಎಲ್ ಬಂದೂಕು ಹಾಗೂ ಆರು ಸಜೀವ ಗುಂಡುಗಳು ಇದ್ದವು.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ 30 Indian Arms Act ಮತ್ತು 447 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Comments are closed.