ಕರಾವಳಿ

ನಳಿನ್ ಕುಮಾರ್ ಆಡಿಯೋ ಧ್ವನಿಸುರುಳಿ ಬಗ್ಗೆ ಅನುಮಾನವಿದ್ದು ಸಮಗ್ರ ತನಿಖೆಯಾಗಬೇಕು-ಸಚಿವ ಕೋಟ ಆಗ್ರಹ

Pinterest LinkedIn Tumblr

ಕುಂದಾಪುರ: ಸಂಘಟನೆ ಹಿನ್ನೆಲೆಯಿಂದ ಬಂದ ನಳಿನ್ ಕುಮಾರ್ ಕಟೀಲ್ ಸೂಕ್ಷ್ಮ ಮತಿಯವರಾಗಿದ್ದಾರೆ. ಸಂಘಟನೆಯ ಸೂತ್ರಗಳನ್ನು ಮೈಗೂಡಿಸಿಕೊಂಡು ಇದೀಗಾ ಬಿಜೆಪಿ ರಾಜ್ಯಾಧ್ಯಕ್ಚರಾಗಿರುವ ಅವರ ಹೆಸರಲ್ಲಿ ಆಡಿಯೋ ಬಿಡುಗಡೆ ಮಾಡಲಾಗಿದೆ. ನಳೀನ್ ಕುಮಾರ್ ಸ್ವರಭಾರಕ್ಕೂ ಈ ಆಡಿಯೋದಲ್ಲಿವ ಧ್ವನಿಸುರುಳಿಯ ಬಗ್ಗೆ ಸಂಶಯ ಇದೆ. ಈ ಆಡಿಯೋ ಬಗ್ಗೆ ತನಿಖೆಯಾಗಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಆಗ್ರಹಿಸುತ್ತಿದ್ದೇನೆ. ಸುಳ್ಳು ಆಡಿಯೋ ಹರಿಬಿಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸೋಮವಾರ ಕುಂದಾಪುರದ ಕಾಳಾವರದಲ್ಲಿ ಮಾಧ್ಯಮದವರೊಂದಿಗೆ ಜೊತೆ ಅವರು ಮಾತನಾಡಿದರು.

ದೇವಸ್ಥಾನದಲ್ಲಿ ಅನ್ನದಾಸೋಹದ ಬಗ್ಗೆ ಚರ್ಚೆ…
ದೇವಸ್ಥಾನಗಳು ಈಗಾಗಲೇ ಭಕ್ತರಿಗೆ ಮುಕ್ತವಾಗಿದೆ. ಸೀಮಿತ ಭಕ್ತರಿಗೆ ದೇವಾಲಯದಲ್ಲಿ ಅನ್ನದಾಸೋಹ ನಡೆಸಲು ಚರ್ಚಿಸಲಾಗಿದೆ. ದೂರದಿಂದ ಆಗಮಿಸುರವ ಭಕ್ತರಿಗೆ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದ್ದು, ಈಗಾಗಲೇ ಮುಖ್ಯಮಂತ್ರಿಯವರೊಂದಿಗೆ ದೇವಸ್ಥಾನದಲ್ಲಿ ಅನ್ನದಾಸೋಹ ನಡೆಸುವ ಕುರಿತು ಚರ್ಚಿಸಲಾಗಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ತೀರ್ಮಾನ ತಗೆದುಕೊಳ್ಳಲಾಗುತ್ತದೆ ಎಂದರು.

ದೇವಸ್ಥಾನಗಳ ಮೇಳಗಳ ಕಲಾವಿದರಿಗೆ ಪೂರ್ಣ ಸಂಭಾವನೆ ಕೊಡಲು ಈಗಾಗಲೇ ಆದೇಶಿಸಲಾಗಿದೆ. ಬಹುತೇಕ ದೇವಸ್ಥಾನಗಳಲ್ಲಿ ಈಗಾಗಲೇ ವೇತನ ಪಾವತಿ ಮಾಡಲಾಗಿದೆ. ಮಾರಣಕಟ್ಟೆಯಲ್ಲಿ ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಮಾರಣಕಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ಸಂಬಳ ಬಿಡುಗಡೆ ಮಾಡುವಂತೆ ಸೂಚನೆ ಕೊಟ್ಟಿದ್ದೇನೆ. ದೇವಸ್ಥಾನದವರು ಪೂರ್ತಿ ಸಂಬಳ ಕೊಡುವ ಬಗ್ಗೆ ಅವರು ಒಪ್ಪಿಕೊಂಡಿದ್ದು ಒಂದೆರಡು ದಿನಗಳಲ್ಲಿ ಪಾವತಿಯಾಗಲಿದೆ ಎಂದರು.

ಒಂದೆ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುವ ಸಿಬ್ಬಂದಿಗಳನ್ನು ಅಂತರಜಿಲ್ಲೆಯ ಒಳಗಡೆ ವರ್ಗಾವಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಒಳ್ಳೆಯ ಕೆಲವ ಮಾಡುವ ಸಿಬ್ಬಂದಿಗಳ ಸೇವೆ ಎಲ್ಲ ಕಡೆ ಸಿಗಬೇಕು ಎನ್ನುವ ಉದ್ದೇಶದಿಂದ ವರ್ಗಾವಣೆ ಬಗ್ಗೆ ಚಿಂತಿಸಲಾಗಿದೆ ಎಂದರು.

ಇನ್ನು ಪದವಿ ಕಾಲೆಜುಗಳು ಆರಂಭವಾಗುವ ಹಿನ್ನೆಲೆ ಅಗತ್ಯವಿರುವೆಡೆ ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್ ತೆರೆಯಲು ಕ್ರಮಕೈಗೊಳ್ಳುತ್ತೇವೆ ಎಂದರು.

ಗೋಮಾಳ ಸಂರಕ್ಷಿಲು ಸರ್ಕಾರ ಸೂಚಿಸಿದೆ. ಆದರೆ ಕೆಲವೆಡೆ ಬಡವರು ಗೋಮಾಳದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಆ ಗೋಮಾಳ ಜಾಗಕ್ಕೆ ಹಕ್ಕು ಪತ್ರಗಳನ್ನು ಕೊಡುವ ವೇಳೆ ಮತ್ತೊಂದು ಸರ್ಕಾರಿ ಜಾಗವನ್ನು ಕಾದಿರಿಸಿಕೊಂಡು ಕೊಡಬೇಕು. ಈ ಮೂಲಕ ಬಡವರಿಗೆ ಮನೆಯ ಆಗುವ ಜೊತೆಗೆ ಗೋಮಾಳ ರಕ್ಷಣೆ ಆದಂತಾಗುತ್ತದೆ ಎಂದರು.

Comments are closed.