ಕರಾವಳಿ

ಹೊಸ ಗೋರಕ್ಷಾ ಕಾಯಿದೆ ಬಳಸಿ ಗೋವಂಶದ ಕುರ್ಬಾನಿ ತಡೆಯಲು ವಿಶ್ವ ಹಿಂದು ಪರಿಷದ್ ಬಜರಂಗದಳ ಕರೆ

Pinterest LinkedIn Tumblr

ಮಂಗಳೂರು : ಕರ್ನಾಟಕ ರಾಜ್ಯದಲ್ಲಿ ಪ್ರಭಲ ಗೋರಕ್ಷಾ ಕಾಯಿದೆ ಬಂದಿರುವುದರಿಂದ ಯಾರಾದರೂ ಕುರ್ಬಾನಿ ಹೆಸರಿನಲ್ಲಿ ಗೋವಂಶ ವಧೆ/ಬಲಿ ಕೊಟ್ಟರೆ ಅವರಿಗೆ ಕನಿಷ್ಠ 3 ವರ್ಷದಿಂದ ಗರಿಷ್ಠ 7 ವರ್ಷದ ವರೆಗೆ ಜೈಲುವಾಸ ಶಿಕ್ಷೆ ಅನುಭವಿಸಬೇಕಾಗುತ್ತದೆ ಹಾಗು ಕನಿಷ್ಠ 1 ಲಕ್ಷ ರೂಪಾಯಿ ಗರಿಷ್ಠ 5 ಲಕ್ಷದ ವರೆಗೆ ದಂಡ ತೆರಬೇಕಾಗುತ್ತದೆ ಎಂದು ವಿಶ್ವ ಹಿಂದು ಪರಿಷದ್ ಪ್ರಾಂತ ಕಾರ್ಯಾಧ್ಯಕ್ಷರು ಪ್ರೊ ಎಂ ಬಿ ಪುರಾಣಿಕ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,  ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯಿದೆ 2020 ರ ಸೆಕ್ಷನ್ 2 (6 ), ಸೆಕ್ಷನ್ 4 , ಸೆಕ್ಷನ್ 8 ರನ್ವಯ ಯಾವ ಸ್ಥಳದಲ್ಲಿ ದನ, ಕರು, ಹೋರಿ 13 ವರ್ಷದೊಳಗಿನ ಎಮ್ಮೆ, ಕೋಣಗಳನ್ನು ವಧಿಸಿದಲ್ಲಿ ಯಾ ಬಲಿ ಕೊಟ್ಟಲ್ಲಿ. ಆ ಸ್ಥಳ (ಕಟ್ಟಡ, ಖಾಸಗಿ ಸ್ಥಳ, ಮನೆ,ತೋಟ ಇತ್ಯಾದಿ)ಗಳನ್ನು ಪೊಲೀಸರು ವಶ ಪಡಿಸಿ ಜಪ್ತಿ ಮಾಡಿ, ಆರೋಪ ಸಾಬೀತಾದರೆ ಆಗ ಶಾಶ್ವತವಾಗಿ ಮುಟ್ಟುಗೋಲು ಹಾಕಲು ಅವಕಾಶವಿದೆ.

ಕಟ್ಟಡ, ಖಾಸಗಿ ಸ್ಥಳ, ಮನೆ ಮುಂತಾದುವುಗಳನ್ನು ಜಪ್ತಿಮಾಡಿದಾಗ ತಾತ್ಕಾಲಿಕವಾಗಿ ಬಿಡುಗಡೆ ಮಾಡಿಕೊಳ್ಳಬೇಕಾದರು ಅದರ ಪೂರ್ತಿ ಬೆಲೆಯಷ್ಟು ಬ್ಯಾಂಕ್ ಗ್ಯಾರಂಟಿ ಕೊಡಬೇಕಾಗುತ್ತದೆ ಎಂದರು.

ಹೀಗೆ ಪ್ರಭಲವಾದ ಕಾನೂನು ಜಿಲ್ಲಾಡಳಿತ ಪ್ರಚಾರ ಮಾಡುವ ಮೂಲಕ ಒಂದೇ ಒಂದು ಗೋವಂಶ ವಧೆ/ಕುರ್ಬಾನಿಯಾಗದಂತೆ ನೋಡಿಕೊಳ್ಳಬೇಕು. ಅಪರಾಧದ ಸಾಧ್ಯತೆ ಕಂಡುಬಂದಲ್ಲಿ ನಿರ್ಧಾಕ್ಷಣ್ಯವಾಗಿ ಪೊಲೀಸರು ಹೊಸ ಕಾಯಿದೆಯಂತೆ ಪ್ರಕರಣ ಧಾಖಲಿಸಿ, ಜಾನುವಾರುಗಳನ್ನು ವಧೆ/ಕುರ್ಬಾನಿ ನಡೆದ ಸ್ಥಳವನ್ನು ವಶಪಡಿಸಿ ಹೊಸ ಕಾಯಿದೆಯನ್ವಯ ನ್ಯಾಯ ಪ್ರಕರಣ ದಾಖಲಿಸಬೇಕು.

ಯಾವುದೇ ಕಾರಣಕ್ಕೆ ರಸ್ತೆ, ಫುಟ್ ಪಾತ್, ಸಾರ್ವಜನಿಕ ಸ್ಥಳ, ಖಾಸಗಿ ಸ್ಥಳಗಳಲ್ಲಿ ಜಾನುವಾರುಗಳನ್ನು ಶೇಖರಿಸಿಡುವುದು ವಧೆ/ ಹಾಗು ಬಲಿಗೆ ಸಹಕಾರ ನೀಡಿದಂತಾಗಿ ಅದು ಅಪರಾಧವಾಗುತ್ತದೆ ಮತ್ತು ಹಾಗೆ ಶೇಖರಿಸಿದ ಜಾನುವಾರುಗಳನ್ನು ಮುಟ್ಟುಗೋಲು ಹಾಕಬೇಕಾಗಿ ಪೊಲೀಸ್ ಇಲಾಖೆಗೆ ಆಗ್ರಹಿಸುತ್ತಿದ್ದೇವೆ.

Central motor vehicle Rule 125E ಯಂತೆ ಸಾಗಾಟವನ್ನು ವ್ಯವಸ್ಥಿತವಾಗಿ partition ಇರುವ special permit vehicle ನಲ್ಲಿ ಕೊಂಡೊಯ್ಯಬೇಕಾಗಿದೆ. ಹೀಗೆ ಕೊಂಡೊಯ್ಯುವುದು ಹೈನುಗಾರಿಕೆ ಮತ್ತು ಕೃಷಿಕರಿಗೆ ಅನುಕೂಲ. ಇತರ ಗೂಡ್ಸ್ ವಾಹನದಲ್ಲಿ ತುಂಬಿಸಿಕೊಂಡು ಹೋದರೆ ಸಾಗಾಟದಲ್ಲಿ ಒಂದಕ್ಕೊಂದು ಜಾನುವಾರುಗಳಿಗೆ ತಾಗಿ ಆಂತರಿಕ ಪೆಟ್ಟುಗಳಾಗಿ ಮುಂದೆ ಅದು ಅನಾರೋಗ್ಯಕ್ಕೆ ತುತ್ತಾಗಿ ಸಾಯಬಹುದು. ಈ ವ್ಯವಸ್ಥಿತ ವಾಹನದಲ್ಲಿ ಸಾಗಾಟ ಮಾಡಿದರೆ ಜಾನುವಾರುಗಳ ಆರೋಗ್ಯವು ಚೆನ್ನಾಗಿರುತ್ತದೆ.
ಪ್ರಾಣಿ ಸಾಗಾಟ ನಿಯಮಗಳು 1978 ಸಾಹಿತಿ ದೇಶದ ಎಲ್ಲಾ ನಿಯಮಾವಳಿಗಳನ್ನು ಪಾಲನೆ ಮಾಡದೆ ಗೋವಂಶ ಸಾಗಾಟ ಮಾಡಿದಲ್ಲಿ ಅವುಗಳನ್ನು ವಶ ಪಡೆಸಬೇಕೆಂದು ಪೊಲೀಸ್ ಇಲಾಖೆಗೆ ಒತ್ತಾಯಿಸುತ್ತಿದ್ದೇವೆ.

ರಸ್ತೆಯಲ್ಲಿ, ಫುಟ್ ಪಾತ್ ಮುಂತಾದೆಡೆಗೆ ಪ್ರಾಣಿಗಳನ್ನು ಕಟ್ಟಿ ಹಾಕುವುದು IPC 268 ರ ಪ್ರಕಾರ ಹಾಗೂ ಇತರ ಕಾಯಿದೆಯ ಪ್ರಕಾರವೂ Public nuisance ಆಗುತ್ತದೆ.

ಕಸಾಯೆಖಾನೆಯ ನಿಯಮಾವಳಿ 2001 (ಪ್ರಾಣಿ ಕ್ರೌರ್ಯ ತಡೆ ಕಾಯಿದೆ 1960 )ರ ಪ್ರಕಾರ ಯಾವುದೇ ಪ್ರಾಣಿಗಳನ್ನು ಅಧಿಕೃತ ಕಸಾಯಿಖಾನೆ ಹೊರತುಪಡಿಸಿ ಸಿಕ್ಕಿದಲ್ಲೆಲ್ಲಾ ವಧಿಸಲು ಅವಕಾಶವಿರುವುದಿಲ್ಲ ( ಅಧಿಕೃತ ಕಸಾಯಿಖಾನೆಯಲ್ಲೂ ಗೋವಂಶ ವಧಿಸಲು ಅವಕಾಶವಿರುವುದಿಲ್ಲ.) .

Animal Welfare Board of India (ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ) ಯು 25 ಜೂನ್ 2021 ರಂದು ಜೂಲೈ 19 – 21 ರಲ್ಲಿ ನಡೆಯುವ ಬಕ್ರೀದ್ ಸಂಧರ್ಭದಲ್ಲಿ ಪ್ರಾಣಿ ನಿಷೇಧ ವಿವಿಧ ಕಾಯಿದೆ ಹಾಗೂ ಕೋರ್ಟ್ ಆದೇಶಗಳನ್ನು ಜಾರಿಗೊಳಿಸುವಂತೆ ಎಲ್ಲಾ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ನಿರ್ದೇಶಕರು ಹಾಗೂ ಪಶು ಸಂಗೋಪನಾ ಇಲಾಖೆಯ ಕಾರ್ಯದರ್ಶಿಗಳಿಗೆ ಪಾತ್ರ ಮೂಲಕ ಆದೇಶಿಸಿರುತ್ತಾರೆ.

ಈ ಮೇಲಿನ ಎಲ್ಲಾ ಕಾರಣದಿಂದ ಹಿಂದುಗಳಿಗೆ ಪವಿತವಾದ ಗೋವಂಶವನ್ನು ಬಲಿ ಕೊಡದಂತೆ ಹಾಗೂ ವಧೆ/ ಬಲಿಗಾಗಿ ಸಾಗಾಟ ಮಾಡದಂತೆ ತಡೆಯಲು ಸರ್ವ ಕ್ರಮಕೈಗೊಳ್ಳಬೇಕು, ಗೋವಂಶಕ್ಕೆ ಹಿಂಸೆ / ಬಲಿ ಮಾಡಿದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆಯಾಗಿ ಹಿಂದು ಸಮಾಜ ಆಕ್ರೋಶದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಜಿಲ್ಲಾಡಳಿತ ಪೂರ್ತಿ ಕ್ರಮ ಕೈಗೊಳ್ಳಬೇಕೆಂದು ಪುರಾಣಿಕ್ ವಿನಂತಿಸಿದ್ದಾರೆ,

ಯಾರಾದರೂ ಗೋವಂಶಕ್ಕೆ ಹಿಂಸೆ ಮಾಡುವುದು / ಬಲಿ ಕೊಡುವುದು/ ಅಕ್ರಮ ಸಾಗಾಟ / ಅಕ್ರಮ ಶೇಖರಣೆ ಮಾಡಿದ್ದು ಕಂಡು ಬಂದರೆ ಸ್ಥಳೀಯ ಬಜರಂಗದಳ ಕಾರ್ಯಕರ್ತರಿಗೆ ಅಥವಾ Animal Helpline Number (24X7 ) – 8277100200 ಕ್ಕೆ ಕರೆ ಮಾಡಿ ತಿಳಿಸಬೇಕು, ಸಾಕ್ಷಿಯಾಗಿ ವಿಡಿಯೋ / ಫೋಟೋ ಕಲಿಸಲು ಅವಕಾಶವಿದೆ ಎಂದು ಪ್ರೊ ಎಂ ಬಿ ಪುರಾಣಿಕ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ಗೋರಕ್ಷ ಪ್ರಮುಖ್ ಕಟೀಲ್ ದಿನೇಶ್ ಪೈ, ಜಿಲ್ಲಾಧ್ಯಕ್ಷರು ಗೋಪಾಲ್ ಕುತ್ತಾರ್, ಜಿಲ್ಲಾ ಸಂಯೋಜಕ್ ಪುನೀತ್ ಅತ್ತಾವರ, ಜಿಲ್ಲಾ ಗೋರಕ್ಷ ಪ್ರಮುಖ್ ಪ್ರದೀಪ್ ಪಂಪವೆಲ್, ಜಿಲ್ಲಾ ಬಜರಂಗದಳ ಗೋರಕ್ಷ ಪ್ರಮುಖ್ ಗುರುಪ್ರಸಾದ್ ಉಳ್ಳಾಲ ಮುಂತಾದವರು ಉಪಸ್ಥಿತರಿದ್ದರು.

Comments are closed.