ಕರಾವಳಿ

ಹಳೇ ಮಾರ್ಕೆಟ್ ಪ್ರದೇಶದಲ್ಲಿನ ವ್ಯಾಪಾರವನ್ನು ಉರ್ವಾ ಹೊಸ ಮಾರುಕಟ್ಟೆ ಕಟ್ಟಡಕ್ಕೆ ಸ್ಥಳಾಂತರಿಸಲು ಸೂಚನೆ

Pinterest LinkedIn Tumblr

(ಕಡತ ಚಿತ್ರಗಳು)

ಮಂಗಳೂರು : ಮಂಗಳೂರು ನಗರದ ಬೋಳೂರು ಗ್ರಾಮದ ಸ.ನಂ. 824/2ಎ, 3ಎ ರಲ್ಲಿ ನಿರ್ಮಾಣವಾಗಿರುವ ಮಾರುಕಟ್ಟೆ ಸಂಕೀರ್ಣದ ಕಾಮಗಾರಿಯನ್ನು 2017 ರಲ್ಲಿ ಪ್ರಾರಂಭಿಸಿದ್ದು, ಈಗ ಇರುವ ಮಾರ್ಕೆಟಿನ ವ್ಯಾಪಾರಸ್ಥರನ್ನುತರಕಾರಿ, ಹಣ್ಣುಹಂಪಲು, ಹೂವು ಅಲ್ಲದೆ ಮೀನು ಮಾರಾಟ, ಕೋಳಿ ಮಾಂಸ ಇನ್ನಿತರ ವ್ಯಾಪಾರವನ್ನು ಈ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವುದು ಹಾಗೂ ಕಟ್ಟಡದ ಮೇಲಿನ ಮಹಡಿಯಲ್ಲಿಇನ್ನಿತರ ಸರಕಾರಿ/ಸರಕಾರಿಯೇತರ ಆಫೀಸುಗಳ ಚಟುವಟಿಕೆಗಳಿಗಾಗಿ ಸ್ಥಳಾವಕಾಶ ಕಲ್ಪಿಸಲಾಗಿದೆ.

2019 ರಲ್ಲಿಕಟ್ಟಡದಕಾಮಗಾರಿಯು ಪೂರ್ಣಗೊಂಡಿದ್ದು, ಈ ಕಟ್ಟಡದ ಉದ್ಘಾಟನೆಯನ್ನು ಫೆಬ್ರವರಿ 2019 ರಲ್ಲಿ ಹಿಂದಿನ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ನೆರವೇರಿಸಿದ್ದು, ಜಿಲ್ಲಾಧಿಕಾರಿ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ ಅಧಿಕಾರಿಯವರಾಗಿದ್ದ ಸಸಿಕಾಂತ ಸೆಂಥಿಲ್‍ರವರ ಉಪಸ್ಥಿತಿಯಲ್ಲಿ ನೆರವೇರಿಸಲಾಗಿದೆ.

2019 ರಿಂದ ಸತತವಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಮಂಗಳೂರು ಮಹಾನಗರಪಾಲಿಕೆಗೆ ಮಾರ್ಕೆಟಿನ ನಿರ್ವಹಣೆಗಾಗಿ ಪತ್ರ ಮುಖೇನ ಹಾಗೂ ಹಲವಾರು ಸುತ್ತಿನ ಮಾತುಕತೆ ಮಾಡಲಾಗಿದೆ.

ಈ ಬಗ್ಗೆ ಒಮ್ಮತದಅಭಿಪ್ರಾಯ ವ್ಯಕ್ತವಾಗದಕಾರಣ ಹಾಗೂ 2020 ರ ನಂತರಕೋವಿಡ್ ಸಮಸ್ಯೆಯಿಂದಾಗಿ ಬಹಳಷ್ಟು ಕೆಲಸ ಕಾರ್ಯಗಳು ವಿಳಂಬವಾಗಿರುತ್ತದೆ.ಆದರೂ ಸರಕಾರದ ಹೂಡಿಕೆಗಳು ಇರುವುದರಿಂದ ಬೇಕಾಗುವ ತಾಂತ್ರಿಕ ಸಲಹೆಗಳನ್ನು ಪಡೆದು ಪತ್ರಿಕಾ ಪ್ರಕಟಣೆಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಪ್ರಕಟಿಸಿ ಸದ್ರಿಕಟ್ಟಡಕ್ಕೆ ಬೇಡಿಕೆಯನ್ನು ಸಾರ್ವಜನಿಕರಿಂದ ಈಗಾಗಲೇ ಪಡೆಯಲಾಗಿದೆ.

ಕೆಳ ಅಂತಸ್ತಿನ 8 ಅಂಗಡಿ ಸಮುಚ್ಚಯಗಳು ಮತ್ತು ಮೇಲಿನ ಅಂತಸ್ತಿನಲ್ಲಿ ಸರಕಾರಿ ಸೌಮ್ಯದ 3 ಕಛೇರಿಗಳು ಈಗಾಗಲೇ ಈ ಕಟ್ಟಡಕ್ಕೆ ಬರಲು ಒಪ್ಪಂದವನ್ನು ಮಾಡಲಾಗಿದೆ.ಕಟ್ಟಡದ ಉಳಿದ ಜಾಗದಲ್ಲಿ ಬಹಳಷ್ಟು ಕಛೇರಿಗಳು ಬರಲುಒಪ್ಪಿಗೆಯನ್ನುಕೊಟ್ಟಿರುತ್ತಾರೆ.

ಮುಂದಿನ ದಿನದಲ್ಲಿ ಹಳೇ ಮಾರ್ಕೆಟ್ ಪ್ರದೇಶದಲ್ಲಿ ವ್ಯಾಪಾರವನ್ನು ಮಾಡುವ ವಿವಿಧ ವ್ಯಾಪಾರಸ್ಥರನ್ನು ಮಹಾನಗರಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಜೊತೆ ಮಾತುಕತೆ ನಡೆಸಿ ಈ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಬಗ್ಗೆ ಕ್ರಮವಹಿಸಲಾಗುವುದು. ಹೆಚ್ಚು ಸಮಯಾವಾಕಾಶವನ್ನು ತೆಗೆದುಕೊಳ್ಳದೇ ಈ ಸಂಪೂರ್ಣ ಸಂಕೀರ್ಣವನ್ನು ಸಾರ್ವಜನಿಕಉಪಯೋಗಕ್ಕಾಗಿಕೊಡುವಂತಹ ಜವಾಬ್ದಾರಿ ಮಂಗಳೂರು ಮಹಾನಗರಪಾಲಿಕೆ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ್ದಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Comments are closed.