ಕರಾವಳಿ

ಕೃಷಿ ವಿಚಕ್ಷಣಾದಳ ದಾಳಿ : ನಾಲ್ಕು ಲಕ್ಷರೂ. ಮೌಲ್ಯದ ಅನಧಿಕೃತ ಕೀಟನಾಶಕ ಹಾಗೂ ರಸಗೊಬ್ಬರ ವಶ ವಶ

Pinterest LinkedIn Tumblr

ಮಂಗಳೂರು, ಜೂನ್ 25 : ಮೂಡಬಿದ್ರೆ ಹೋಬಳಿಯಲ್ಲಿ ಅನಧಿಕೃತ ಕೃಷಿ ಕೀಟನಾಶಕಗಳನ್ನು ಹಾಗೂ ರಸಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದ ದಿವ್ಯಜ್ಯೋತಿ-ಕೃಷಿ ಕೇಂದ್ರದ ಮಳಿಗೆ ಮೇಲೆ ಕೃಷಿ ವಿಚಕ್ಷಣಾದಳದ ಅಧಿಕಾರಿಗಳು ದಾಳಿ ನಡೆಸಿ ಸುಮಾರು ನಾಲ್ಕು ಲಕ್ಷರೂ. ಮೌಲ್ಯದ ಕೀಟನಾಶಕ ಹಾಗೂ ರಸಗೊಬ್ಬರಗಳನ್ನು ವಶಪಡಿಸಿಕೊಂಡಿದ್ದಾರೆ.

ಕೃಷಿ ವಿಚಕ್ಷಣಾದಳದ ಉಪ ಕೃಷಿ ನಿರ್ದೇಶಕ ಭಾನು ಪ್ರಕಾಶ್, ವೀಣಾ. ಕೆ.ಆರ್, ತಾಂತ್ರಿಕ ಅಧಿಕಾರಿ ಮಧುಕೇಶ್ವರ್.ಬಿ ಹಾಗೂ ಇತರೆ ಸಿಬ್ಬಂದಿಗಳ ನೇತೃತ್ವದತಂಡ ದಾಳಿ ನಡೆಸಿ ಸುಮಾರು ನಾಲ್ಕು ಲಕ್ಷರೂ. ಮೌಲ್ಯದ ಕೀಟನಾಶಕ ಹಾಗೂ ರಸಗೊಬ್ಬರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Comments are closed.