ಕರಾವಳಿ

ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಪ್ರಸಾದ್ ಕದ್ರಿ ನೇತೃತ್ವದಲ್ಲಿ ಅಕ್ಕಿ, ದವಸ ಧಾನ್ಯ ಕಿಟ್ ವಿತರಣೆ

Pinterest LinkedIn Tumblr

ಸಮಾಜಮುಖಿ ಕೆಲಸ ನಿಜಕ್ಕೂ ಸುತ್ಯಾರ್ಹ : ಸುಂದರ ಆಚಾರ್ಯ ಬೆಳುವಾಯಿ.

ಮಂಗಳೂರು : ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಕಳೆದ ವರ್ಷದ ಲಾಕ್ ಡೌನ್ ಸಂದರ್ಭ ಮತ್ತು ಈ ಬಾರಿಯ ಲಾಕ್ ಡೌನ್ ಸಂದರ್ಭ ಪದ್ಮರಾಜ್ ಎಕ್ಕಾರ್ ಇವರ ಸಹಕಾರದಿಂದ ಸಾರ್ವಜನಿಕರಿಗೆ ಅಕ್ಕಿ ವಿತರಣೆ ಪ್ರಸಾದ್ ಕದ್ರಿ ನೇತೃತ್ವದಲ್ಲಿ ನೀಡಲಾಯಿತು.

ಇದೀಗ ದಾನಿಗಳ ಸಹಕಾರದಿಂದ ವಿಶ್ವಕರ್ಮ ಸಮಾಜದ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ 160 ಜನರಿಗೆ ಪ್ರಸಾದ್ ಕದ್ರಿ ನೇತೃತ್ವದಲ್ಲಿ ಮಂಗಳೂರು ನಗರ ಪ್ರದೇಶದಲ್ಲಿ ಅವರವರ ಮನೆಗೆ ತೆರಳಿ ಅಕ್ಕಿ, ದವಸ ಧಾನ್ಯ ಕಿಟ್ ಗಳನ್ನು ನೀಡಲಾಯಿತು.

ಕದ್ರಿ ದೇವಸ್ಥಾನದ ಬಳಿಯಿರುವ ಗೋಕುಲ್ ಹಾಲ್ ನಲ್ಲಿ ನಡೆದ ಸಾಂಕೇತಿಕ ಸರಳ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಯವರು ಲೊಕ್ ಡೌನ್ ನಂತಹ ಸಂದಿಗ್ದ ಪರಿಸ್ಥಿಯಲ್ಲಿ ಅಕ್ಕಿ, ದವಸ ಧಾನ್ಯಗಳ ಕಿಟ್ ವಿತರಣೆಯನ್ನು ಪ್ರಸಾದ್ ಕದ್ರಿಯವರು ದಾನಿಗಳ ಸಹಕಾರದಿಂದ ಮಾಡುವ ಅಮೂಲ್ಯವಾದ ಸಮಾಜಮುಖಿ ಕೆಲಸ ನಿಜಕ್ಕೂ ಸುತ್ಯಾರ್ಹ ಎಂದರು.

ಹಸಿದ ಹೊಟ್ಟೆಗೆ ಆಹಾರ ಪೂರೈಕೆಗೆ ಬೇಕಾಗುವ ಕಿಟ್ ವಿತರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಸೂರಜ್ ಕದ್ರಿ ಉಪಸ್ಥಿತರಿದ್ದರು. ಪ್ರಸಾದ್ ಕದ್ರಿ ಸ್ವಾಗತಿಸಿದರು. ವಿವೇಕ್ ಆಚಾರ್ಯ, ರಾಜೇಶ್ ಆಚಾರ್ಯ, ಉಮೇಶ್ ಆಚಾರ್ಯ ಕದ್ರಿ, ಗೋಕುಲ್ ಕದ್ರಿ ಮುಂತಾದವರು ಸಹಕರಿಸಿದರು. ಸುಜೀರ್ ವಿನೋದ್ ಕಾರ್ಯಕ್ರಮ ನಿರೂಪಿಸಿದರು.

Comments are closed.