ಕರಾವಳಿ

ನಾಳೆ ದಿ.ಇಬ್ರಾಹಿಂ ತಣ್ಣೀರುಬಾವಿ ಸ್ಮರಣಾರ್ಥ ‘ಬ್ಯಾರಿ ಅರ್ಚೊ ಮಸಾಲೆ 2021’ ಬ್ಯಾರಿ ಸಂಗೀತ ಕಾರ್ಯಕ್ರಮ

Pinterest LinkedIn Tumblr

ಮಂಗಳೂರು, ಜೂನ್.19: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಜೂನ್ 20ರ ಆದಿತ್ಯವಾರದಂದು ರಾತ್ರಿ 7 ಗಂಟೆಯಿಂದ 10 ಗಂಟೆಯವರೆಗೆ ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ದಿಗ್ಗಜರಾದ ದಿವಂಗತ ಇಬ್ರಾಹಿಂ ತಣ್ಣೀರುಬಾವಿ ಇವರ ನೆನಪಿಗಾಗಿ ‘ಬ್ಯಾರಿ ಅರ್ಚೊ ಮಸಾಲೆ 2021’ ಬ್ಯಾರಿ ಸಂಗೀತ ಲೈವ್ ಕಾರ್ಯಕ್ರಮವನ್ನು ಅಕಾಡೆಮಿಯ ಯೂಟ್ಯೂಬ್ ಮತ್ತು ಫೇಸ್ ಬುಕ್ ಚಾನೆಲ್ ಮುಖಾಂತರ ಪ್ರಸಾರ ಮಾಡಲಿದೆ.

ಬ್ಯಾರಿ ಭಾಷೆಯ ಪ್ರಸಿದ್ದ ಗಾಯಕರಾದ ಅನಿತಾ ಡಿಸೋಜಾ, ಮುಹಮ್ಮದ್ ಇಕ್ಬಾಲ್, ಹುಸೈನ್ ಕಾಟಿಪಳ್ಳ, ಅಶ್ರಫ್ ಅಪೋಲೊ, ಶರೀಫ್ ಪರ್ಲಿಯಾ, ಮತ್ತು ಫೈಝ್ ಕಾಟಿಪಳ್ಳ ಇವರು ಭಾಗವಹಿಸಲಿದ್ದಾರೆ.

ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಗೀತ ಪ್ರಿಯರು ಬಯಸುತ್ತಿದ್ದು,
ಈ ಬಗ್ಗೆ ನಿರಂತರವಾಗಿ ಬೇಡಿಕೆಗಳು ಬಂದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿ ಅಕಾಡೆಮಿಯ ಸದಸ್ಯರಾದ ಶಂಶೀರ್ ಬುಡೋಳಿ ಇವರು ಕಾರ್ಯನಿರ್ವಹಿಸಲಿದ್ದಾರೆ. ಪ್ರತಿಯೊಬ್ಬರು ಈ ಕಾರ್ಯಕ್ರಮವನ್ನು ಮನೆಯಲ್ಲಿ ಕುಳಿತು ವೀಕ್ಷಿಸಬೇಕಾಗಿ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.