ಕರಾವಳಿ

ಜೂನ್ 22ರಿಂದ 27: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯೋಗದ ಬಗ್ಗೆ ಅಂತರರಾಷ್ಟ್ರೀಯ ವೆಬಿನಾರ್

Pinterest LinkedIn Tumblr

ಮಂಗಳೂರು, ಜೂನ್ 19 : ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜೂನ್ 22ರಿಂದ 27ರ ವರೆಗೆ ಮಾನವಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ ಹಾಗೂ ಧರ್ಮನಿಧಿಯೋಗ ಪೀಠ ಇವು ಬೆಂಗಳೂರಿನ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಯೋಗಿಕ್ ಸೈನ್ಸಸ್ ಇದರ ಸಹಯೋಗದೊಂದಿಗೆ ಆರು ದಿನಗಳ ವೆಬಿನಾರನ್ನು ಏರ್ಪಡಿಸಲಾಗಿದೆ.

ವೆಬಿನಾರ್‍ನ ಉದ್ಘಾಟನೆಯು ಜೂನ್ 22 ರಂದು ಬೆಳಿಗ್ಗೆ 9.30ಕ್ಕೆ ಆನ್‍ಲೈನ್ ಮೂಲಕ ನಡೆಯಲಿರುವುದು. ಬೆಂಗಳೂರಿನ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಯೋಗಿಕ್ ಸೈನ್ಸಸ್ ಇದರ ನಿರ್ದೇಶಕ ಪ್ರೊ. ಎ. ಸಿ. ಪಾಂಡೆ ಇವರು ವೆಬಿನಾರನ್ನು ಉದ್ಘಾಟಿಸುವರು. ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಸ್. ಯಡಪಡಿತ್ತಾಯ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಅಂತರರಾಷ್ಟ್ರೀಯ ವೆಬಿನಾರ್‍ನ ಸಮಾರೋಪವು ಜೂನ್ 27 ರಂದು ಸಂಜೆ 4.30ಕ್ಕೆ ನಡೆಯಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಮಾನವಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷ ಡಾ. ಕೆ. ಕೃಷ್ಣ ಭಟ್ ಇವರು ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಆರು ದಿನಗಳ ಈ ವೆಬಿನಾರ್‍ನಲ್ಲಿ ಪ್ರತಿದಿನವು ಸಂಜೆ 3ರಿಂದ 5 ಗಂಟೆಯವರೆಗೆ ದೇಶ ವಿದೇಶಗಳ 27 ಸಂಪನ್ಮೂಲ ವ್ಯಕ್ತಿಗಳು ಮನಸ್ಸನ್ನು ನಿಯಂತ್ರಿಸುವ ವಿಧಾನಗಳು, ಮಹಿಳಾ ಆರೋಗ್ಯ, ಯೋಗದಿಂದ ರೋಗ ನಿರೋಧಕ ಶಕ್ತಿಯ ಬೆಳವಣಿಗೆ, ಶಿಕ್ಷಣದಲ್ಲಿ ಯೋಗದ ಅಗತ್ಯ, ಪರ್ಯಾಯ ಚಿಕಿತ್ಸಾ ಪದ್ಧತಿಯಾಗಿ ಯೋಗ ಚಿಕಿತ್ಸೆ, ಧ್ಯಾನ, ಯೋಗ ಬೋಧನಾ ವಿಧಾನಗಳು, ಉತ್ತಮ ಜೀವನಕ್ಕಾಗಿ ಯೋಗ, ಯೋಗದಲ್ಲಿ ಸಂಶೋಧನಾ ವಿಧಾನಗಳು, ಯೋಗದ ಶಾಸ್ತ್ರಗ್ರಂಥಗಳ ಅಧ್ಯಯನದ ಅವಶ್ಯಕತೆ ಇಂತಹವುಗಳ ಬಗ್ಗೆ ತಮ್ಮ ವಿಷಯ ಮಂಡಿಸಲಿರುವರು.

ಪೂರ್ತಿ ವೆಬಿನಾರ್ ಆನ್‍ಲೈನ್ ಮೂಲಕ ನಡೆಯಲಿದೆ. ವೆಬಿನಾರ್‍ನ ಉದ್ಘಾಟನೆಯಲಿಂಕ್: https://mangaloreuniversity.webex.com/mangaloreuniversity/j.php?MTID=m7dc91ac1c4fc3d626d04003831f68c56 Meeting number:182 327 1053 Password:Yoga@2021

ನೋಂದಾಯಿತ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಎಲ್ಲರೂ ಈ ವೆಬಿನಾರ್ ನ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕಚೇರಿ ಪ್ರಕಟಣೆ ತಿಳಿಸಿದೆ.

Comments are closed.