ಕರಾವಳಿ

ಧರೆಗುರುಳಿದ ಹಳೆಯ ಗೋಲಿ ಮರ: 5 ವಿದ್ಯುತ್ ಕಂಬಕ್ಕೆ ಹಾನಿ – ಪಕ್ಕದಲ್ಲಿದ್ದ 5 ಮನೆಗಳು ಅಪಾಯದಿಂದ ಪಾರು

Pinterest LinkedIn Tumblr

ಮಂಗಳೂರು : ಕರಾವಳಿಯಲ್ಲಿ ಮಳೆಯಬ್ಬರ ಮುಂದುವರಿದಿದೆ ನಿನ್ನೆ ಸುರಿದ ಭಾರೀ ಗಾಳಿಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡೇಶಿವಾಲಯ ಗ್ರಾಮದ ಸಂಪೋಳಿ ಎಂಬಲ್ಲಿ ಬೃಹತ್‌ ಗಾತ್ರದ ಗೋಲಿ ಮರವೊಂದು ಧರೆಗುರುಳಿದೆ.

ಸಂಜೆ ಸುಮಾರು ನಾಲ್ಕರ ವೇಳೆಗೆ ಭಾರೀ ಗಾಳಿಗೆ ಬೃಹತ್‌ ಗಾತ್ರದ ಗೋಲಿ ಮರ ರಸ್ತೆಗೆ ಉರುಳಿದ್ದು ಅದೃಷ್ಟವಶಾತ್‌ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಹಳೆಯದಾದ ಬೃಹತ್‌ ಗಾತ್ರದ ಮರ ಉರುಳಿಬಿದ್ದ ಪರಿಣಾಮ ಸಮೀಪದಲ್ಲೇ ಇದ್ದ ಐದಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಕೂಡ ಧರೆಗುರುಳಿವೆ.

ಇಲ್ಲಿನ ನಾಗೇಶ್‌ ಸಂಪೋಳಿ ಎಂಬುವವರ ಜಮೀನಿನಲ್ಲಿ ಇದ್ದ ಈ ಗೋಲಿ ಮರದ ಪಕ್ಕದಲ್ಲೇ ನಾಲ್ಕೈದು ಮನೆಗಳು ಇದ್ದವು. ಆದೃಷ್ಟವಶಾತ್‌ ಯಾವುದೇ ಮನೆಗಳಿಗೆ ಹಾನಿಯಾಗಿಲ್ಲ.

Comments are closed.