ಕರಾವಳಿ

ಸೇವಾಂಜಲಿ ಆಶ್ರಯ ಹಸ್ತ ವತಿಯಿಂದ ಅರ್ಹ ಫಲಾನುಭವಿಗಳಿಗೆ 300 ಕಿಟ್ ಗಳ ವಿತರಣೆ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಅಗತ್ಯವಸ್ತುಗಳನ್ನು ಒಳಗೊಂಡ ಸೇವಾಂಜಲಿ-ಆಶ್ರಯಹಸ್ತ ಕಿಟ್ ಅನ್ನು ವಿತರಿಸಲಾಗುತ್ತಿದ್ದು ಸುಳ್ಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸುಮಾರು 300 ಕಿಟ್ ಗಳನ್ನು ವಿತರಿಸಲಾಯಿತು.

ಸಮಾಜದ ಕಡುಬಡವರಿಗೆ ಸಹಾಯಹಸ್ತ ಚಾಚುವ ಸೇವೆಯನ್ನು ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ಮಾಡುತ್ತಾ ಬಂದಿರುವ ಸಮಾಜಸೇವಾ ಸಂಘಟನೆ ಆಶ್ರಯಹಸ್ತ ಟ್ರಸ್ಟ್ ಕೋವಿಡ್ ಲಾಕ್ ಡೌನ್ ನ ಅವಧಿಯಲ್ಲಿ ಬದುಕು ಸಾಗಿಸಲು ಹರಸಾಹಸ ಪಡುತ್ತಿರುವ ಕುಟುಂಬಗಳ ಸಹಾಯಕ್ಕೆ ಮುಂದೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತ್ಯೋದಯ ಕಾರ್ಡ್ ಹೊಂದಿರುವ ಬಿಪಿಎಲ್ ರೇಖೆಗಿಂತಲೂ ಕೆಳಗಿರುವ 3000 ಕಡುಬಡವರಿಗೆ ಕಿಟ್ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಉತ್ತಮ ದರ್ಜೆಯ ಆಹಾರ ವಸ್ತುಗಳು, ದಿನನಿತ್ಯದ ಅಗತ್ಯ ವಸ್ತುಗಳನ್ನು ಹೊಂದಿರುವ ಕಿಟ್ ಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯದಲ್ಲಿ ಮಂಗಳೂರಿನ ಸಮಾಜಮುಖಿ ಸಂಘಟನೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಕೈಜೋಡಿಸಲಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಮೇಜರ್ ಎಸ್ ನಂಜುಂಡಯ್ಯ ಅವರು ಟ್ರಸ್ಟಿಗಳಾದ ದಿನೇಶ್ ಕೆ, ಆಶಾ ದಿನೇಶ್ ಅವರು ಜೊತೆ ಸೇರಿ ಆರಂಭಿಸಿರುವ ಆಶ್ರಯಹಸ್ತ ಟ್ರಸ್ಟ್ ಪ್ರಸ್ತುತ ಇವರ ಮಕ್ಕಳಾದ ದಿವ್ಯಾ ಹಾಗೂ ದೀಕ್ಷಾ ಅವರ ಸಮರ್ಥ ನೇತೃತ್ವದಲ್ಲಿ ಜನಸೇವಾ ಕಾರ್ಯ ಕೈಗೊಂಡಿದೆ.

Comments are closed.