
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮಂಗಳೂರು ಮತ್ತು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನಲ್ಲಿ ಕೊಂಕಣಿ ಅಕಾಡೆಮಿಯಲ್ಲಿ ಇದ್ದ ನಿರುಪಯೋಗಿ ವಾಹನವೊಂದನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಲಾಯಿತು.
ಸೇವಾಂಜಾಲಿ ಚಾರಿಟೇಬಲ್ ಟ್ರಸ್ಟ್ ಈ ವಾಹನವನ್ನು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿಗೊಳಿಸಿ ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಮತ್ತು ರೋಗಿಗಳು ಮೃತಪಟ್ಟರೆ ಉಚಿತವಾಗಿ ಸೇವೆ ಒದಗಿಸಲು ಬಳಸಲು ಹಾಗೂ ಇನ್ನಿತರ ಸಮಾಜ ಸೇವೆಗೆ ಬಳಸುವರೆ ಕೊಂಕಣಿ ಅಕಾಡೆಮಿಗೆ ಈ ಹಿಂದೆ ಮನವಿ ಸಲಿಸಿರುತ್ತಾರೆ.
ಅಧ್ಯಕ್ಷರು ಮತ್ತು ಸರ್ವಸದಸ್ಯರ ಒಪ್ಪಿಗೆ ಮೇರೆಗೆ ಇಂದು ಈ ವಾಹನ ಹಸ್ತಾಂತರಿಸಲಾಯಿತು. ಸೇವಂಜಲಿ ಟ್ರಸ್ಟ್ ನ ವತಿಯಿಂದ ಶ್ರೀ ಹನುಮಂತ ಕಾಮತ್, ಶ್ರೀ ನರೇಶ್ ಶೆಣೈ, ಶ್ರೀ ನರೇಶ್ ಪ್ರಭು, ಶ್ರೀ ಚೇತನ್ ಕಾಮತ್ ಮತ್ತು ಇತರರು ಉಪಸ್ಥಿತರಿದ್ದರು.
ಕೊಂಕಣಿ ಅಕಾಡೆಮಿ ಪರವಾಗಿ ಸದಸ್ಯರಾದ ಶ್ರೀ ಅರುಣ್ ಜಿ ಶೇಟ್, ಶ್ರೀ ಗೋಪಾಲಕೃಷ್ಣ ಭಟ್, ಶ್ರೀ ಕೆನ್ಯೂಟ ಜೀವನ್ ಪಿಂಟೋ, ಶ್ರೀ ನವೀನ್ ನಾಯಕ್ ಹಾಗೂ ರಿಜಿಸ್ಟ್ರಾರ್ ಶ್ರೀ ಮನೋಹರ್ ಕಾಮತ್ ವಾಹನವನ್ನು ಹಸ್ತಾಂತರ ಮಾಡಿದರು.
Comments are closed.