ಕರಾವಳಿ

ವಾರ್ಷಿಕ ಹಬ್ಬಕ್ಕೆ ತಯಾರಿ : ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ಒಂಬತ್ತನೇ ದಿನದ ನೊವೇನ ಪ್ರಾರ್ಥನೆ

Pinterest LinkedIn Tumblr

ಮಂಗಳೂರು : ಸಂತ ಜೋಸೆಫ್ ಸೆಮಿನರಿಯ ವಂ. ಫಾ. ಫ್ರಾನ್ಸಿಸ್ ಡಿ’ಸೋಜರವರು ಸಂತ ಆಂತೋನಿ ಆಶ್ರಮದಲ್ಲಿ ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ನೊವೇನ ಪ್ರಾರ್ಥನೆಯ ಒಂಬತ್ತನೇ ದಿನದಂದು ಬಲಿಪೂಜೆ ಅರ್ಪಿಸಿ ಪ್ರವಚನ ಮಾಡಿದರು.

ವಿಷಯ:

ಹೆತ್ತವರಿಗೆ ದೇವರ ಆಶೀರ್ವಾದ ಬೇಡುವುದು. ನಮ್ಮ ಹೆತ್ತವರು ಈ ಭೂಲೋಕದಲ್ಲಿ ದೇವರ ಪ್ರತಿರೂಪ. ಕಷ್ಟ ನೋವೆನ್ನದೆ, ಏನನ್ನೂ ಆಪೇಕ್ಷಿಸದೆ ನಮ್ಮನ್ನು ಪ್ರೀತಿ ವಾತ್ಸಲ್ಲ್ಯದಿಂದ ಸಾಕಿ ಸಲಹಿದವರು. ದೇವರು ಮೋಶೆಯ ಮುಖಾಂತರ ದಶ ಆಜ್ಞೆಗಳನ್ನು ನೀಡಿದಾಗ ಮನುಷ್ಯರಿಗೆ ಸಂಭದಪಟ್ಟ ಆಜ್ಞೆಗಳಲ್ಲಿ ಹೆತ್ತವರಿಗೆ ಗೌರವ ನೀಡುವ ಆಜ್ಞೆಗೆ ಪ್ರಾಮುಖ್ಯತೆ ಕೊಟ್ಟರು.

ನಮಗೆ ಜನ್ಮ ನೀಡಿದ ನಮ್ಮ ಹೆತ್ತವರ ನೆನಪು ಮಾಡುತ್ತಿರುವಾಗ ಅವರು ದೇವರ ಪಾದ ಸೇರಿದರೆ ಭಗವಂತ ಅವರಿಗೆ ಚಿರ ಶಾಂತಿ ನೀಡಲಿ, ಅವರು ನಮ್ಮೊಂದಿಗೆ ಇದ್ದರೆ ದೇವರು ಅವರಿಗೆ ಆರೋಗ್ಯ ಮತ್ತು ನೆಮ್ಮದಿ ನೀಡಲೆಂದು ಪ್ರಾರ್ಥಿಸೋಣ ಎಂದು ಫಾ. ಡಿ’ಸೋಜರವರು ಕರೆ ನೀಡಿದರು.

ಸಂಸ್ಥೆಯ ಸಹಾಯಕ ನಿರ್ದೇಶಕ ಫಾ. ರೋಶನ್ ಡಿ’ಸೋಜರವರು ನೊವೇನ ಪ್ರಾರ್ಥನೆ ನಡೆಸಿಕೊಟ್ಟರು.

Comments are closed.