
ಮಂಗಳೂರು, ಜೂನ್.02: ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಬಗ್ಗೆ ವಾಟ್ಸಪ್ಪ್ ಗ್ರೂಪ್ ನಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಮಾನಹಾನಿಕಾರಕ ಮತ್ತು ಅವಹೇಳನಕಾರಿ ಸಂದೇಶವನ್ನು ರವಾನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಬಜಾಲ್ನ ನೌಶಾದ್ (27), ಮೂಡಬಿದ್ರೆಯ ಜಯಕುಮಾರ್ (33), ಸುಳ್ಯ ಕಸಬಾ ತಾಲೂಕಿನ ಭವಾನಿ ಶಂಕರ್ (32) ಹಾಗೂ ಕಾವೂರಿನ ರವಿ ಅಲಿಯಾಸ್ ಟಿಕ್ಕಿ ರವಿ (38) ಬಂಧಿತ ಆರೋಪಿಗಳು.
ಬಂಧಿತರು ತಮಗೆ ಬಂದಿದ್ದ ಸಂದೇಶವನ್ನು ಇತರ ಗ್ರೂಪ್ ಹಾಗೂ ಸ್ನೇಹಿತರಿಗೆ ಪಾರ್ವಾಡ್ ಮಾಡಿದ್ದಾರೆ. ಈ ಸಂದೇಶದ ಮೂಲ, ಸತ್ಯಾಸತ್ಯತೆ ಹಾಗೂ ಇತರರು ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತಂತೆ ತನಿಖೆ ನಡೆಯತ್ತಿದೆ ಎಂದು ಪೊಲೀಸ್ ಆಯುಕ್ತರು ಸುದ್ಧಿಗಾರರಲ್ಲಿ ತಿಳಿಸಿದ್ದಾರೆ.

ಶರಣ್ ಪಂಪುವೆಲ್
ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ರವರ ಮೇಲೆ ನಿರಂತರ ಅಪಪ್ರಚಾರ ಸುಳ್ಳು ಸುದ್ದಿಗಳನ್ನು ಹರಡಿ ಅವಹೇಳನಕಾರಿ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಅವಮಾನ ಮಾಡುತ್ತಿರುವುದು ಕಂಡು ಬಂದಿದ್ದು ಅಲ್ಲದೆ ವಿಶ್ವ ಹಿಂದೂ ಪರಿಷತ್ತಿನ ಯುವತಿಯರ ವಿಭಾಗ ದುರ್ಗಾವಾಹಿನಿಯ ಮೇಲೆ ಇಲ್ಲದ ಸುಳ್ಳು ಆರೋಪಗಳನ್ನು ಹಾಕಿ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ.
ಕೋವಿಡ್ ಸಮಯದಲ್ಲಿ ವಿಶ್ವ ಹಿಂದು ಪರಿಷದ್ ಬಜರಂಗದಳ ಸಮಾಜದ ಪರವಾಗಿ ನಿಂತು ನಿರಂತರವಾಗಿ ಸೇವೆ ಮಾಡುತ್ತಿದ್ದು ಇದನ್ನು ಸಹಿಸದ ಸಮಾಜಘಾತುಕ ಶಕ್ತಿಗಳು ಸಂಘಟನೆಯ. ಹೆಸರು ಕೆಡಿಸಲು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ.
ಆರೋಪಿಗಳನ್ನು ತಕ್ಷಣ ಬಾಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್, ಬಜರಂಗದಳ ಹಾಗೂ ದುರ್ಗಾವಾಹಿನಿಯ ಘಟಕಗಳ ಪ್ರಮುಖರು ಪೊಲೀಸರಿಗೆ ದೂರು ನೀಡಿದ್ದರು.

Comments are closed.