
ಮಂಗಳೂರು ; ಸಂತ ಆಂತೋನಿ ವಾರ್ಷಿಕ ಮಹೋತ್ಸವಕ್ಕೆ ತಯಾರಿಯಾಗಿ ಹದಿಮೂರು ದಿನಗಳ ನೊನೇನ ಪ್ರಾರ್ಥನೆಗೆ ಜೆಪ್ಪು ಸಂತ ಜೋಸೆಫ್ ಗುರುಮಠದ ರೆಕ್ಟರ್ ವಂ. ಡಾ. ರೊನಾಲ್ಡ್ ಸೆರಾವೊರವರು ಸಂತ ಆಂತೋನಿಯವರ ಧ್ವಜಾರೋಹಣ ಮಾಡಿ ಚಾಲನೆ ನೀಡಿದರು.
ತದನಂತರ ಸಾಯಾಂಕಾಲ 6 ಗಂಟೆಗೆ ಬಲಿಪೂಜೆ ಅರ್ಪಿಸಿ ಪ್ರವಚನ ನೀಡಿದರು. ಫಾ. ಸೆರಾವೊರವರು ತಮ್ಮ ಪ್ರವಚನದಲ್ಲಿ ನಾವು ದೇವರಿಗೆ ಪಾತ್ರರಾಗಿ ಜೀವಿಸುವುದೆಂದರೆ ಕಷ್ಟ-ಸಂಕಷ್ಟದಲ್ಲಿದವರಿಗೆ ನೆರವಾಗುವುದು, ನಮ್ಮ ಕೈಲಾದ ಸಹಾಯ ಮಾಡುವುದು. ಇಂದಿನ ದಿನಗಳಲ್ಲಿ ನಮ್ಮ ನೆರವು ಬೇಕಾದವರು ಸಾಕಷ್ಟು ಜನರಿದ್ದಾರೆ. ಅವರ ನೋವನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸಿದರೆ ನಾವು ದೇವರ ಮೆಚ್ಚುಗೆಗೆ ಪಾತ್ರರಾಗುವೆವು ಎಂದು ತಿಳಿಸಿದರು.

ಹದಿಮೂರು ದಿನಗಳ ನೊವೇನ ಪ್ರಾರ್ಥನೆಯಲ್ಲಿ ವಿವಿಧ ರೀತಿಯ ಕೋರಿಕೆಗಳಿಗಾಗಿ(ನಿರುದ್ಯೋಗಿಗಳು, ಕಾಯಿಲೆಯಿಂದ ಬಳಲುವವರು, ಹೆತ್ತವರು, ಕಾರ್ಮಿಕರು) ಮತ್ತು ‘ಕೋವಿಡ್ 19’ ನಿವಾರಣೆಗಾಗಿ ಪ್ರತ್ಯೇಕ ಪ್ರಾರ್ಥನೆ ಸಲ್ಲಿಸಲಾಗುವುದು.

ಫಾ. ರೋಶನ್ ಡಿ’ಸೋಜ ಸಂಸ್ಥೆಯ ಸಹಾಕ ನಿರ್ದೇಶಕರು ಮೊದಲ ದಿನದ ನೊವೇನ ಪ್ರಾರ್ಥನೆ ನಡೆಸಿ ಕೊಟ್ಟರು. ನಿರ್ದೇಶಕರಾದ ಫಾ. ಒನಿಲ್ ಡಿ’ಸೋಜರವರು ಪ್ರಸ್ತಾವನೆ ನೀಡಿದರು. ಈ ಎಲ್ಲಾ ಭಕ್ತಿ ಕಾರ್ಯ-ಕ್ರಮಗಳು ಡಿವೈನೆ ವರ್ಡ್ ಟಿ.ವಿ. ವಾಹಿನಿ ಮತ್ತು ಇತರ ಜಾಲತಾಣಗಳಲ್ಲಿ ಮಾತ್ರ ಪ್ರಸಾರ ಮಾಡಲಾಗುತ್ತದೆ.
Comments are closed.