
ಮುಂಬೈ ಜೂನ್ 1 : ಮುಂಬೈಯ ಕುಲಾಲ ಬಂಧುಗಳಲ್ಲಿ ಅಚ್ಚಳಿಯದೆ ಉಳಿದಿರುವ ಹಿರಿಯ ಚೇತನ ರಾಮಯ್ಯ ಎಂ ಮಾಡ್ವ ರವರು ಕಳೆದ ವರ್ಷ ಜೂನ್ ಒಂದರಂದು ಸ್ವರ್ಗಸ್ಥ ರಾಗಿದ್ದರು ಈ ವರ್ಷ ಅವರ ಪ್ರಥಮ ಸಂಸ್ಮರಣೆ ಯು ಮುಂಬೈಯ ಪೇಜಾವರಮಠದ ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಥಮ ಸಂಸ್ಮರಣೆಯ ನೆನಪಿಗಾಗಿ ವಿಶೇಷ ಪೂಜೆಗಳನ್ನು ರಾಮಯ್ಯ ಮಾಡ್ವ ಅವರ ಪತ್ನಿ ವಸಂತಿ ಮಾಡ್ವ ಮಕ್ಕಳಾದ ಸುಜಯ ಹರಿಶ್ಚಂದ್ರ ಬಂಗೇರ ಮತ್ತು ಸುಚಿತ ವಿಶ್ವನಾಥ್ ಮೂಲ್ಯ ಮತ್ತವರ ಮೊಮ್ಮಕ್ಕಳು ಕುಟುಂಬಸ್ಥರು ಉಪಸ್ಥಿತಿಯಲ್ಲಿ ನಡೆಯಿತು.

ಕರ್ನಾಟಕದ ಗಡಿ ಭಾಗದಲ್ಲಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕೊಡ್ಲಾಮೋಗೇರು ಮಾಡ್ವ ಮನೆಯ ರಾಮಪ್ಪ ಮೂಲ್ಯ(ಆರ್.ಎಂ ಮಾಡ್ವ) ರವರು ಜೂನ್ ಒಂದರಂದು ಸೂರ್ಯೋದಯದ ವೇಳೆ ದೈವದೀನರಾದರು.
85ವರ್ಷದ ತುಂಬು ಜೀವನ ಜೀವಿಸಿದ ಇವರು,ಪ್ರತಿಷ್ಠಿತ ಕುಲಾಲ ಸಮಾಜದ ಹಿರಿಯ ಮುಂದಾಳುವಾಗಿ, ಕರ್ಮಭೂಮಿಯಲ್ಲಿ ಎಲ್ಲ ಕಡೆ ಹಂಚಿ ಹರಿದು ಹೋಗಿದ್ದ ತನ್ನ ಕುಲಭಾಂದವರನ್ನೆಲ್ಲಾ ಒಂದೆಡೆ ಸೇರಿಸಿ,ಅವರನ್ನು ಸಂಘಟಿತರನ್ನಾಗಿ ಮಾಡುವ ತನ್ಮೂಲಕ, ಮುಂಬೈ ನಗರದಲ್ಲಿ “ಕುಲಾಲ ಸಂಘದ ಮುಂಬೈಯ” ಅವಿರತ ಸೇವೆ ಮಾಡಿದವರು ಸಂಘದದಲ್ಲಿ ವಿವಿಧ ಪದವಿಗಳನ್ನು ಅಲಂಕರಿಸಿ ಬಳಿಕ ಅಧ್ಯಕ್ಷರಾಗಿ,ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮನದಲ್ಲಿ ಯಾವತ್ತೂ ನೆನಪುಳಿಯುವ ಕಾರ್ಯವನ್ನು ಮಾಡಿ, ಆ ಸಮಾಜದ ಏಳ್ಗೆಯ ಹರಿಕಾರ ಅನ್ನಿಸಿಕೊಂಡವರಿವರು.
ಜೀವನದ ಗೆಲುವಿಗಾಗಿ ಅವರು ತಾಯ್ನಾಡನ್ನು ಬಿಟ್ಟು ಈ ಮಾಯಾನಗರಿಗೆ ಬಂದು, ನಗರದ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ,ಭಾರತೀಯ ಜೀವವಿಮಾ ನಿಗಮದ ಏಜೆಂಟ್ ಆಗಿ, ಕಾಯಕ ಯೋಗಿ ಎನಿಸಿಕೊಂಡವರು ಶ್ರೀ ಆರ್ ಎಂ ಮಡ್ವಾರವರು.
ಕುಲಾಲ ಸಮಾಜ ಆರ್ಥಿಕವಾಗಿ ಪ್ರಬಲವಾಗಬೇಕು,ಎಲ್ಲರೂ ಸ್ವಾವಲಂಬಿಗಳಾಗಿ ಬದುಕಬೇಕು ಅನ್ನುವ ಉದ್ದೇಶದಿಂದ ಜ್ಯೋತಿ ಕೋ.ಆಪರೇಟಿವ್ ಸೊಸೈಟಿಯ ಸ್ಥಾಪನೆಯಲ್ಲಿ ಇವರು ಒಬ್ಬರಾದರು, ಈ ಸಂಸ್ಥೆಯ ಅಭಿವೃದ್ಧಿಗೆ ಬದುಕಿನ ಬಹಳಷ್ಟು ಸಮಯಗಳನ್ನು ನೀಡಿದರು.
ಇಲ್ಲಿ ವಿವಿಧ ಹುದ್ದೆಗಳನ್ನು ಜವಾಬ್ದಾರಿಯಿಂದ ನಿಭಾಯಿಸಿ ಬಳಿಕ ಕಾರ್ಯದಕ್ಷರಾಗಿ ತುಂಬಾ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಸಮಾಜದ ಆರ್ಥಿಕ ಬಲವರ್ಧನೆಗೆ ಅವಿರತ ಪ್ರಯತ್ನ ಪಟ್ಟ ದೂರದೃಷ್ಟಿಯ ನಾಯಕರಿವರು..
ತನ್ನ ಜೀವಿತಾವಧಿಯ ಕೊನೆಯ ಗಳಿಗೆವರೆಗೂ ಸಮಾಜಕ್ಕಾಗಿ ಬದುಕಿದ ಸಾರ್ಥಕ ಬದುಕು ಶ್ರೀಯುತ ರದ್ದು.ಎಲ್ಲರ ನೋವು ನಲಿವುಗಳಲ್ಲಿ ಭಾಗಿಯಾಗಿ ಕಷ್ಟದಲ್ಲಿರುವವರಿಗೆ ಶಕ್ತಿ ಮೀರಿ ಸಹಾಯ ಹಸ್ತ ಚಾಚಿ ಅವರ ಕಣ್ಣೀರನ್ನು ಒರೆಸುವ ಮನೆಯ ಹಿರಿಯ ಮಗನಂತೆ ಇದ್ದವರಿವರು. ಕುಲಾಲ ಸಂಘ ಪ್ರಾರಂಭದ ದಿನಗಳಲ್ಲಿ ದೀಪಾವಳಿ,ದಸರಾ ಮೊದಲಾದ ಉತ್ಸವದ ಸಂದರ್ಭದಲ್ಲಿ ಸಂಘಕ್ಕಾಗಿ ದೇಣಿಗೆಯ ಸಂಗ್ರಹಣೆಗೆ ಶ್ರಮ ವಹಿಸಿದವರು..
ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಲೇ ಇಷ್ಟು ವರ್ಷ ಸಾರ್ಥಕ ಬದುಕನ್ನು ಸಾಗಿಸಿದರು
ಜೂನ್ ಒಂದರಂದು ಪೇಜಾವರ ಮಠದಲ್ಲಿ ನಡೆದ ಸಂಸ್ಮರಣಾ ಕಾರ್ಯಕ್ರಮದಲ್ಲಿ ರಾಮಯ್ಯ ಎಂ ಮಾಡ್ವ ಕುಟುಂಬಿಕರು ಹಿತೈಷಿಗಳು ಜ್ಯೋತಿ ಕೋಪರೇಟಿವ್ ಸೊಸೈಟಿ ಕಾರ್ಯಧ್ಯಕ್ಷ ಗಿರೀಶ ಬಿ ಸಾಲ್ಯಾನ್ ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಮರ್ಪಿಸಿದರು.
ಚಿತ್ರ ವರದಿ: ದಿನೇಶ್ ಕುಲಾಲ್
Comments are closed.