ಕರಾವಳಿ

50ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ ಇರುವ‌ ಗ್ರಾಮಗಳು ಬುಧವಾರದಿಂದ 5 ದಿನ ಸಂಪೂರ್ಣ ಲಾಕ್ಡೌನ್

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ 50 ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಸೋಂಕಿತ‌ ಪ್ರಕರಣಗಳಿರುವ ಗ್ರಾಮಗಳನ್ನು 5 ದಿನಗಳ ಕಾಲ (ಜೂ.7ರವರೆಗೆ) ಸಂಪೂರ್ಣ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.

(ಸಂಗ್ರಹ ಚಿತ್ರ)

ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಪತ್ತೆಯಾಗುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ 50ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸೋಂಕಿತರು ‌ಇರುವ ಗ್ರಾಮವನ್ನು ಜೂ.2 ಬುಧವಾರದಿಂದ ಸಂಪೂರ್ಣ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಈಗಾಗಾಲೇ ಕುಂದಾಪುರ ಹಾಗೂ ಬೈಂದೂರು ಸಹಿತ ವಿವಿದೆಡೆ ಆಯಾಯ ಗ್ರಾ.ಪಂ ವ್ಯಾಪ್ತಿಯಲ್ಲಿ ಮುಂಜಾಗೃತಾ ಕ್ರಮವಾಗಿ ಸ್ವಯಂ ಲಾಕ್ ಡೌನ್ ಹೇರಿಕೊಳ್ಳಲಾಗಿದ್ದು ಆಯಾಯ ಗ್ರಾಮಪಂಚಾಯತ್, ಟಾಸ್ಕ್ ಫೋರ್ಸ್ ಹಾಗೂ ವಾರಿಯರ್ಸ್ ಮುತುವರ್ಜಿಯಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.