ಕರಾವಳಿ

ಕೊರೋನಾ ಸಂದರ್ಭವೂ ಕುಂದಾಪುರದ ಗೋಪಾಡಿಯಲ್ಲಿ ನಡೆಯುತ್ತಿದ್ದ ಕೋಳಿ ಅಂಕ: ಮೂವರ‌ ಸಹಿತ ವಾಹನಗಳು ವಶಕ್ಕೆ

Pinterest LinkedIn Tumblr

ಕುಂದಾಪುರ: ಗೋಪಾಡಿ ಗ್ರಾಮದ ಗೋಪಾಡಿ ಪಡುಶಾಲೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಆಡುತ್ತಿದ್ದ ಅಡ್ಡಕ್ಕೆ ಕುಂದಾಪುರ ‌ಪಿಎಸ್ಐ ಸದಾಶಿವ ಗವರೋಜಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದ್ದಾರೆ.

(ಸಾಂದರ್ಭಿಕ ಚಿತ್ರ)

ಕೊರೋನಾ‌ ಸಂಕಷ್ಟದ ಕಾಲದಲ್ಲೂ ಸುಮಾರು 10 ಮಂದಿ ಕೋಳಿ‌ಅಂಕ‌ ಜುಗಾರಿ‌ ಆಡುತ್ತಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಮಣೂರು ಮೂಲದ ಸಂತೋಷ್ ಪೂಜಾರಿ, ಮಲ್ಯಾಡಿಯ ರಂಗನಾಥ, ಕುಂದಾಪುರ ವಿಠಲವಾಡಿಯ ನಾಗರಾಜ ಮರಕಾಲ ಆರೋಪಿಗಳು. ಆರೋಪಿಗಳಿಂದ 1550 ರೂ., 4 ಹುಂಜ, ಲಕ್ಷಾಂತರ ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಕೊರೋನಾ ನಿಯಮಗಳನ್ನು ಉಲ್ಲಂಘಿಸಿ, ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೋಳಿ ಅಂಕ ಆಡುತ್ತಿದ್ದ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.