ಕರಾವಳಿ

ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್‌ನಿಂದ ನಿರಂತರ ಸೇವಾ ಕಾರ್ಯ : ನಿರ್ಗತಿಕರಿಗೆ ಅಗತ್ಯ ವಸ್ತುಗಳ ವಿತರಣೆ

Pinterest LinkedIn Tumblr

ಮಂಗಳೂರು : ಕೊವೀಡ್ 2 ನೇ ಅಲೆ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿದ್ದವರಿಗೆ ಕಳೆದ 1 ತಿಂಗಳಿಂದ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಹಲವು ಸೇವಾ ಕಾರ್ಯವನ್ನು ಮಾಡುತ್ತ ಬರುತ್ತಿದೆ.

ಇದೀಗ ಮಂಗಳೂರು ನಗರದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನಿಂದ ಸೇವಾ ಚಟುವಟಿಕೆ ಮುಂದುವರಿದಿದ್ದು ಮಳೆಗಾಲ ಪ್ರಾರಂಭವಾಗಿದ್ದರಿಂದ ಅಗತ್ಯ ವಸ್ತುಗಳಾದ ಮಳೆಗಾಲದ ಕ್ಯಾಪ್, ಟಿ ಶರ್ಟ್, ಟವೆಲ್, ಮತ್ತು ಸಂಜೆಯ ತಿಂಡಿ ವಿತರಿಸಲಾಯಿತು.

ನಗರದ ಸ್ಟೇಟ್ ಬ್ಯಾಂಕ್ ನ ರಾವ್ ಅ್ಯಂಡ್ ರಾವ್ ಸರ್ಕಲ್, ಬಿಜೈ ಕೆಎಸ್ ಆರ್ ಟಿಸಿ ಮತ್ತು ಉರ್ವಸ್ಟೊರ್ ನ ಮೈದಾನ ಸೇರಿದಂತೆ ವಿವಿಧೆಡೆ ಸುಮಾರು 1200ಕ್ಕೂ ಹೆಚ್ಚು ಬೀದಿ ಬದಿ ನೆಲೆಸಿದ್ದವರಿಗೆ ಅಗತ್ಯ ವಸ್ತುಗಳನ್ನು ಹಂಚಲಾಯಿತು.

ಈ ಸೇವಾ ಕಾರ್ಯದಲ್ಲಿ ಟ್ರಸ್ಟ್‌ನ ಪ್ರಮುಖರಾದ ನರೇಶ್ ಶೆಣೈ, ಹನುಮಂತ ಕಾಮತ್, ನರೇಶ್ ಪ್ರಭು ಚೇತನ್ ಕಾಮತ್, ಸಿದ್ಧಾರ್ಥ್ ಭಟ್ , ಕಾರ್ಪೊರೇಟರ್ ಶಕೀಲಾ ಕಾವ, ಅವಿನಾಶ್ ಪ್ರಭು ಸಚಿನ್ ಪೈ ಮತ್ತಿತರರೂ ಪಾಲ್ಗೊಂಡಿದ್ದರು.

Comments are closed.