
ಮಂಗಳೂರು : ಜಿಲ್ಲಾಡಳಿತ ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ ಏಳು ಗಂಟೆಗೆ ಮುಂಚಿತವಾಗಿ ಬಂದು ಕಡ್ಡಾಯವಾಗಿ ಏಳು ಗಂಟೆಗೆ ಪಡಿತರ ವಿತರಣೆ ಪಾರಂಬಿಸ ಬೇಕು ಎಂದು ಆದೇಶ ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ಇದೀಗ ನಗರದ ಹೆಚ್ಚಿನ ನ್ಯಾಯಬೆಲೆ ಅಂಗಡಿಗಳಲ್ಲಿ ಉದ್ದ ಉದ್ದದ ಸರತಿ ಸಾಲು ಕಂಡು ಬರುತ್ತಿವೆ.
ಪಡಿತರ ಚೀಟಿದಾರರು ದಟ್ಟಣೆಯಾದಲ್ಲಿ ಆದ್ಯತೆ ಮೇರೆಗೆ ಸಾಲಿನಲ್ಲಿ ನಿಲ್ಲಲು ಕ್ಯೂ ಸ್ಲಿಪ್ ಯಾ ಟೋಕನ್ ಗಳನ್ನು ನೀಡಿ ಪಡಿತರ ವಿತರಿಸುವುದು. 10 ಗಂಟೆಯ ನಂತರವೂ ಕ್ಯೂನಲ್ಲಿದ್ದ ಪಡಿತರ ಚೀಟಿದಾರರನ್ನು ಹಿಂದಕ್ಕೆ ಕಳುಹಿಸದೆ ಕಡ್ಡಾಯವಾಗಿ ಪಡಿತರ ವಿತರಿಸಬೇಕು ಎಂಬ ಆದೇಶ ಹೊರಡಿಸಲಾಗಿದೆ.
ಪಡಿತರ ವಿತರಣಾ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಅಂತೆಯೇ ಸಾನಿಟೈಸರ್ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳುವುದು. ಆದಾರ್ ಓಟಿಪಿ ಸೌಲಭ್ಯಯವನ್ನು ಒದಗಿಸಿರುವುದರಿಂದ ಯಾವುದೇ ಗೊಂದಲಕ್ಕೆ ಒಳಗಾಗದೆ ಪಡಿತರ ವಿತರಿಸುವುದು ಮತ್ತು ಪಡಿತರ ಚೀಟಿದಾರರನ್ನು ಬಯೋ ಮೆಟ್ರಿಕ್ ಕೊಡಲು ಒತ್ತಾಯಿಸಬಾರದು.
ನ್ಯಾಯಬೆಲೆ ಅಂಗಡಿಗಳಲ್ಲಿ 2021ನೇ ಮೇ ಮಾಹೆಯ PMGKAY ಒಳಗೊಂಡ ವಿತರಣಾ ಪ್ರಮಾಣದ ಫಲಕವನ್ನು ಅಳವಡಿಸುವುದು, ಮಾತ್ರವಲ್ಲದೆ ಪಡಿತರ ಚೀಟಿಗಳಿಗೆ ನಿಗದಿಪಡಿಸಲಾದ ಪ್ರಮಾಣದಲ್ಲಿ ಪಡಿತರ ವಿತರಣೆಯನ್ನು ಕೈಗೊಳ್ಳುವುದು. ಯಾವುದೇ ಕಾರಣಕ್ಕೂ ಕಡಿಮೆ ಪ್ರಮಾಣದಲ್ಲಿ ಪಡಿತರವನ್ನು ವಿತರಿಸತಕ್ಕದಲ್ಲ.ಪಡಿತರದಲ್ಲಿ ಬೆಳ್ತಿಗೆ ಹಾಗೂ ಕುಚ್ಚಿಲಕ್ಕಿಯನ್ನು ಸಮ ಪ್ರಮಾಣದಲ್ಲಿ ವಿತರಿಸುವುದು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಪಡಿತರವನ್ನು ವಿತರಿಸುವುದು. ಯಾವುದೇ ಕಾರಣಕ್ಕೂ ಕಾನೂನು ಬಾಹಿರವಾಗಿ ಹಣ ಪಡೆಯಬಾರದು. ನ್ಯಾಯಬೆಲೆ ಅಂಗಡಿದಾರರು ಪಡಿತರ ಚೀಟಿದಾರರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಜನ ದಟ್ಟಣೆಯಾಗದಂತೆ ಹಾಗೂ ಸುವ್ಯವಸ್ಥೆ ಕಾಪಾಡಲು ಈಗಾಗಲೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕುಳಾಯಿ ನ್ಯಾಯಬೆಲೆ ಅಂಗಡಿಯಲ್ಲಿ ಕ್ಯೂ!
ಆದರೂ ಬೈಕಂಪಾಡಿ ಸಮೀಪದ ಕುಳಾಯಿ ನ್ಯಾಯಬೆಲೆ ಅಂಗಡಿಯಲ್ಲಿ ಜನರು ನಸುಕಿನ ಜಾವ 7 ಗಂಟೆಗೆ ಕ್ಯೂ ನಿಲ್ಲುತ್ತಾರೆ. 7 ಗಂಟೆಯಿಂದ ರೇಷನ್ ವಿತರಣೆ ನಡೆಯಬೇಕಿದ್ದು ಶನಿವಾರ 1 ಗಂಟೆಯ ಕಾಲ ಸರ್ವರ್ ದೋಷದಿಂದ ವಿಳಂಬವಾಗಿದೆ.
ಅಲ್ಲಿಗೆ ಕೂಳೂರು, ಪಣಂಬೂರು ಕಡೆಯಿಂದ ರೇಷನ್ ತರಲು ಹೋಗುತ್ತಾರೆ. ಗುಂಪುಗುಂಪಾಗಿ 600ಕ್ಕೂ ಹೆಚ್ಚು ಮಂದಿ ಸೇರುತ್ತಿದ್ದು ಸಾಮಾಜಿಕ ಅಂತರವೂ ಇಲ್ಲವಾಗಿದೆ.

ರೇಷನ್ ಅಂಗಡಿಯಿಂದ ತೆರಳುವಾಗ ರಿಕ್ಷಾ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲಾಡಳಿತ ಆದಷ್ಟು ಬೇಗ ಇದನ್ನು ಸರಿಪಡಿಸಿ ರೇಷನ್ ವಿತರಣೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಮಾಜಿ ಶಾಸಕ ಮೊಹಿದೀನ್ ಬಾವಾ ಆಗ್ರಹಿಸಿದ್ದಾರೆ.
Comments are closed.