
ಮಂಗಳೂರು : ಕೋವಿಡ್ ನಿಯಂತ್ರಣಕ್ಕಾಗಿ 100 ಕೋಟಿ ರೂಪಾಯಿ ನೀಡುವುದಾಗಿ ಕಾಂಗ್ರೇಸ್ ಘೋಷಿಸಿರುವುದು ಅವರ ಪಕ್ಷದ ಹಣವನ್ನಲ್ಲ. ಶಾಸಕರಿಗೆ, ಸಂಸದರಿಗೆ ನೀಡುವ ಅನುದಾನವನ್ನು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದ್ದಾರೆ.
ಸುದ್ಧಿಗಾರರ ಜೊತೆ ಮಾತನಾಡಿದ ಶಾಸಕ ಕಾಮತ್ ಅವರು, ಈಗಾಗಲೇ ಬಿಜೆಪಿಯ ಶಾಸಕರು ಸಂಸದರು ತಮ್ಮ ಅನುದಾನವನ್ನು ಕೋವಿಡ್ ನಿಯಂತ್ರಣಕ್ಕಾಗಿ ಬಳಸಿಕೊಳ್ಳಲು ತಿಳಿಸಿದ್ದಾರೆ.
ಆದರೆ ಕಾಂಗ್ರೇಸ್ ಮುಖಂಡರು ತಮ್ಮ ವೈಯಕ್ತಿಕ ಹಣ ನೀಡುವ ರೀತಿಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ 100 ಕೋಟಿ ರೂಪಾಯಿ ನೀಡುವುದಾಗಿ ಡಂಗೂರ ಸಾರುತಿದ್ದಾರೆ. ಸ್ವತಃ ಪಕ್ಷದ ವತಿಯಿಂದ ಕೊಡುತ್ತಿರುವಂತೆ ಅಗ್ಗದ ಪ್ರಚಾರ ಪಡೆಯುತಿದ್ದಾರೆ ಎಂದುಕಿಡಿಕಾರಿದ್ದಾರೆ.
Comments are closed.