ಕರಾವಳಿ

ನವೋದಯ ಪ್ರೇರಕರಿಗೆ ಪ್ರೋತ್ಸಾಹ ಧನ : ಡಾ. ಎಂ.ಎನ್.ರಾಜೇಂದ್ರ ಕುಮಾರ್

Pinterest LinkedIn Tumblr

ಮಂಗಳೂರು : ಕೊರೊನಾ ಸಂಕಷ್ಟದ ಸಮಯದಲ್ಲಿ ನವೋದಯ ಸ್ವ ಸಹಾಯ ಸಂಘಗಳ ಮೇಲ್ವಿಚಾರಣೆ ನಡೆಸುತ್ತಿರುವ ನವೋದಯ ಪ್ರೇರಕರಿಗೆ ಪ್ರೋತ್ಸಾಹ ಧನ ನೀಡಲು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಮುಂದಾಗಿದೆ ಎಂದು ಟ್ರಸ್ಟ್ ನ ಮೆನೇಜಿಂಗ್ ಟ್ರಸ್ಟಿ ಡಾ. ಎಂ. ಎನ್ . ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ನವೋದಯ ಪ್ರೇರಕರ ಕರ್ತವ್ಯ ಪಾಲನೆಯನ್ನು ಈ ಸಂದರ್ಭದಲ್ಲಿ ಗುರುತಿಸಿ, ದಕ್ಷಿಣ ಕನ್ನಡ, ಉಡುಪಿ , ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪ್ರೇರಕರಿಗೆ ತಲಾ ರೂ. 2000ರಂತೆ ಪ್ರೋತ್ಸಾಹ ಧನವನ್ನು ನೀಡಲಾಗುವುದು . ಕಳೆದ ಬಾರಿಯೂ ಕೊರೊನಾ ಸಂಕಷ್ಟದ ಸಮಯದಲ್ಲಿ ಆಹಾರ ಕಿಟ್ ಗಳನ್ನು ನವೋದಯ ಪ್ರೇರಕರಿಗೆ ಹಾಗೂ ಸಿಬ್ಬಂದಿಗಳಿಗೆ ಟ್ರಸ್ಟ್ ವತಿಯಿಂದ ವಿತರಿಸಲಾಗಿದೆ .

ಲಾಕ್ ಡೌನ್ ನಿಂದ ನವೋದಯ ಪ್ರೇರಕರಿಗೆ ಆರ್ಥಿಕ ಉತ್ತೇಜನ ನೀಡುವ ಉದ್ದೇಶದಿಂದ ಹಾಗೂ ನವೋದಯ ಸ್ವ ಸಹಾಯ ಸಂಘಗಳ ಸಂಘಟನೆಯಲ್ಲಿ ಅವರ ಸೇವೆಯನ್ನು ಉತ್ತೇಜಿಸುವ ಸಲುವಾಗಿ ಪ್ರೋತ್ಸಾಹ ಧನವನ್ನು ನವೋದಯ ಟ್ರಸ್ಟ್ ನೀಡುತ್ತಿದೆ . ನವೋದಯ ಪ್ರೇರಕರಿಗೆ ನೀಡುವ ಈ ಪ್ರೋತ್ಸಾಹ ಧನ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದೆಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

Comments are closed.