ಕರಾವಳಿ

ಸ್ಥಳೀಯಾಡಳಿತ ಜನಪ್ರತಿನಿಧಿಗಳನ್ನು ಕೊರೋನಾ ವಾರಿಯರ್ಸ್ ಎಂದು ಗುರುತಿಸಲು ಮುಖ್ಯಮಂತ್ರಿಗಳಿಗೆ ಮನವಿ

Pinterest LinkedIn Tumblr

ಮಂಗಳೂರು, ಮೇ 19 : ರಾಜ್ಯದಲ್ಲಿರುವ ಗ್ರಾಮ ಪಂಚಾಯತ್‌ಗಳ ಕರ‍್ಯ ಪಡೆಗಳು ಹಾಗೂ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್, ಮಹಾನಗರ ಪಾಲಿಕೆ ಮತ್ತು ನಗರ ಪಂಚಾಯತ್‌ಗಳ ಸದಸ್ಯರು ಪ್ರತಿನಿತ್ಯ ಕೊರೋನಾ ಪೀಡಿತರನ್ನು ಭೇಟಿ ಮಾಡಿ ಕರ್ತವ್ಯ ನಿರ್ವಹಿಸಿ ಕೊರೋನಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ತಲ್ಲೀನರಾಗಿರುತ್ತಾರೆ.

ಅದ್ದರಿಂದ ಇವರೆಲ್ಲರಿಗೂ ಕೊರೋನಾ ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುವ ಕೊರೋನಾ ವಾರಿಯರ್ಸ್ ಕೊಟ್ಟಂತಹ ಪ್ರಾಶಸ್ತ್ಯವನ್ನು ನೀಡಿ, ಇವರನ್ನು ಕೊರೋನಾ ವಾರಿರ‍್ಸ್ ಎಂದು ಗುರುತಿಸಿ, ಪ್ರಥಮ ಹಂತದಲ್ಲಿ ಆದ್ಯತೆ ಮೇರೆಗೆ ವಾಕ್ಸಿನ್‌ಗಳನ್ನು ನೀಡಲು ಸೂಕ್ತ ಆದೇಶವನ್ನು ನೀಡುವಂತೆ, ಹಿಂದುಳಿದ ವರ್ಗಗಳ ಕಲ್ಯಾಣ, ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿರುತ್ತಾರೆ.

Comments are closed.