ಕರಾವಳಿ

ಸೇವ್ ಲೈಫ್ ಟ್ರಸ್ಟ್ ವತಿಯಿಂದ ವೆನಲಾಕ್ ಆಸ್ಪತ್ರೆಗೆ 6 ಆಕ್ಸಿಜೆನ್ ಕಾನ್ಸನ್ಟ್ರೇಟರ್ಸ್ ಹಸ್ತಾಂತರ

Pinterest LinkedIn Tumblr

ಮಂಗಳೂರು, ಮೇ.16 : ನಗರದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 6 ಆಕ್ಸಿಜೆನ್ ಕಾನ್ಸನ್ಟ್ರೇಟರ್ಸ್ ಗಳನ್ನು ಜಿಲ್ಲಾ ವೆನಲಾಕ್ ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮುಖಾಂತರ ಶನಿವಾರ ಹಸ್ತಾಂತರಿಸಲಾಯಿತು.

ಕಳೆದ ಹಲವಾರು ವರ್ಷಗಳಿಂದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ವೈದ್ಯಕೀಯ ಸೌಲಭ್ಯದಿಂದ ವಂಚಿತರಾದ ಜನರಿಗೆ ಸಾಮಾಜಿಕ ಜಾಲತಾಣದ ಮುಖಾಂತರ ಹಣ ಸಂಗ್ರಹಿಸಿ ವೈದ್ಯಕೀಯ ವೆಚ್ಚ ಭರಿಸುತಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಕಳೆದ 10 ತಿಂಗಳಿನಲ್ಲಿ 200 ಕ್ಕೂ ಅಧಿಕ ಬೇರೆ ಬೇರೆ ಕಾರಣಗಳಿಗೆ 1.1 ಕೋಟಿಗೂ ಅಧಿಕ ಮೊತ್ತ ಸಹಾಯ ಹಸ್ತ ಚಾಚಿದ್ದು, ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದೆ.

ಈ ಬಾರಿ ಮಂಗಳೂರು, ಬಂಟ್ವಾಳ, ಉಡುಪಿಯ 700 ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ಗಳನ್ನು ವಿತರಿಸಲಾಗಿದೆ. ಮಾತ್ರವಲ್ಲದೇ ಕಷ್ಟದಲ್ಲಿದ್ದ ಪತ್ರಕರ್ತರಿಗೆ, ಕೋವಿಡ್ ಸೋಂಕಿತರಿಗೆ ಹಾಗೂ ಬಡ ಕುಟುಂಬಗಳಿಗೆ ಅಕ್ಕಿ ಹಾಗೂ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ಮಾನವೀಯ ಸೇವೆ ಮಾಡಿದೆ.

ಮಹಾಮಾರಿಯ ಎರಡನೇ ಅಲೆಯು ವಿಪರೀತವಾಗಿ ಹರಡುತ್ತಿದ್ದು , ರಾಜ್ಯಾದ್ಯಂತ ಕೈ ಮೀರಿಹೋಗಿರುತ್ತದೆ, ಈ ಪರಿಸ್ಥಿತಿಯನ್ನು ಮನಗಂಡು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 6 ಓಕ್ಸಿಜೆನ್ ಕಾನ್ಸನ್ಟ್ರೇಟರ್ಸ್ ಗಳನ್ನು ಜಿಲ್ಲಾ ವೆನಲಾಕ್ ಆಸ್ಪತ್ರೆಗೆ ನೀಡಲಾಗಿದೆ.

ಈ ಓಕ್ಸಿಜೆನ್ ಕಾನ್ಸನ್ಟ್ರೇಟರ್ಸ್ ಗಳನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ನೀವು ತಮ್ಮ ಸಂಸ್ಥೆಯ ವತಿಯಿಂದ ಸಾರ್ವಜಿಕರಿಗೆ ಉಪಯೋಗವಾಗುವಂತಹ ಸೇವಾ ಕಾರ್ಯ ಮೆಚ್ಚು ವಂಥದದ್ದು, ನೀವು ನೀಡಿದ ರೀತಿಯಂತೆ ಇನ್ನು ಸಾರ್ವಜನಿಕ ಸೇವಾ ಸಂಸ್ಥೆಗಳು ಮುಂದೆ ಬರುವಂತೆ ಆಗಲಿ. ತಮ್ಮ ಸಂಸ್ಥೆಯ ಸೇವಾ ಕಾರ್ಯಗಳು ಇದೇ ರೀತಿ ಮುಂದುವರಿದು, ಇನ್ನಷ್ಟು ಫಲನುಭವಿಗಳಿಗೆ ತಲುಪುವಂತಾಗಲಿ ಎಂದು ಹೇಳಿ ಸಂಸ್ಥೆ ಮುಂದಿನ ಚಟುವಟಿಕೆಗಳು ಯಶಸ್ಸುಗಳಿಸಲಿ ಎಂದು ಶುಭ ಹಾರೈಸಿದರು.

ಬಳಿಕ 6 ಓಕ್ಸಿಜೆನ್ ಕಾನ್ಸನ್ಟ್ರೇಟರ್ಸ್ ಗಳನ್ನು ಡಿ ಎಂ ಓ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಅರ್ಜುನ್ ಭಂಡಾರ್ಕಾರ್, ಪ್ರಮುಖರಾದ ಛಾಯಾಗ್ರಾಹಕ ಮಂಜು ನೀರೇಶ್ವಾಲ್ಯ , ರಮೇಶ್ ಶೆಣೈ ಉಪಸ್ಥಿತರಿದ್ದರು .

 

Comments are closed.