ಕರಾವಳಿ

ಪತ್ರಕರ್ತರಿಗೆ ಲಸಿಕೆ ಆರಂಭ: ಲಭ್ಯವಿರುವ ಲಸಿಕೆಯಲ್ಲಿ ಪತ್ರಕರ್ತರಿಗೆ ಪ್ರಥಮ ಆದ್ಯತೆ

Pinterest LinkedIn Tumblr

ಮಂಗಳೂರು : ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರವರನ್ನು ಕರೋನಾ ಫ್ರಂಟ್ ಲೈನ್ ವರ್ಕರ್ ಎಂದು ಈಗಾಗಲೇ ಪರಿಗಣಿಸಿ ಆದೇಶ ಹೊರಡಿಸಿದೆ.

ಉಚಿತ ಲಸಿಕೆ ನೀಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಿರುವ ಪತ್ರಕರ್ತರಿಗೆ ಹಾಗೂ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸರ್ಕಾರದಿಂದ ಪ್ರತ್ಯೇಕವಾಗಿ ಲಸಿಕೆ ಆಗಮಿಸುವುದಾಗಿ ತಿಳಿಸಿರುತ್ತಾರೆ.

ಆದರೂ ಸಹ ಪತ್ರಕರ್ತರ ಮಿತ್ರರ ಆರೋಗ್ಯ ದೃಷ್ಟಿಯಿಂದ ಮುತುವರ್ಜಿ ವಹಿಸಿ ಗುರುವಾರ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಲಭ್ಯವಿರುವ ಲಸಿಕೆಯಲ್ಲಿ ಪತ್ರಕರ್ತರಿಗೆ ಆದ್ಯತೆಯ ಮೇಲೆ ನೀಡಬೇಕೆಂದು ಮನವಿ ಮಾಡಿ, ಮನವೊಲಿಸಿ ಲಸಿಕೆಯನ್ನು ಕೂಡಲೇ ನೀಡಬೇಕೆಂದು ಕೋರಿ, ಗುರುವಾರದಿಂದ ಲಸಿಕೆ ನೀಡಲು ಪ್ರಾರಂಭಿಸಲಾಗಿದೆ.

ಜಿಲ್ಲೆಯಲ್ಲಿ ಲಸಿಕೆ ದಾಸ್ತಾನು ಕೊರತೆಯಿರುವ ಹಿನ್ನೆಲೆ ಎಲ್ಲರಿಗೂ ಏಕ ಕಾಲದಲ್ಲಿ ನೀಡಲು ಅಸಾಧ್ಯವಾದ ಕಾರಣ, ಮುಂದಿನ ಎರಡು ದಿನಗಳ ಒಳಗಾಗಿ ಮತ್ತೆ ಜಿಲ್ಲೆಗೆ ಲಸಿಕೆ ದಾಸ್ತಾನು ಆಗಮಿಸಲಿದ್ದು,ಆ ಕೂಡಲೇ ಮೊದಲ ಆದ್ಯತೆಯಲ್ಲಿ ಬಾಕಿ ಇರುವ ಎಲ್ಲಾ ಪತ್ರಕರ್ತರಿಗೆ ನಂತರ ಇತರೆ ಸಿಬ್ಬಂದಿಗಳಿಗೆ ಲಸಿಕೆಯನ್ನು ನೀಡಲಾಗುವುದು. ಪತ್ರಕರ್ತರು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.

Comments are closed.