ಕರಾವಳಿ

ಜಿಲ್ಲೆಯಲ್ಲಿ ಇಂದಿನಿಂದ ಲಸಿಕೆ ಲಭ್ಯವಿಲ್ಲ : ಮುಂದಿನ ದಿನಾಂಕ ಶೀಘ್ರ ಪ್ರಕಟ

Pinterest LinkedIn Tumblr

ಮಂಗಳೂರು, ಮೇ 12 : ಕೋವಿಡ್ ಲಸಿಕಾಕರಣಕ್ಕೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡ ಜಿಲ್ಲೆಗೆ ಸರಬರಾಜಾದ ಲಸಿಕೆಯಲ್ಲಿ 45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ, ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಮೇ 12 ರಿಂದ ಲಸಿಕೆಯ ಲಭ್ಯತೆ ಇಲ್ಲದಿರುವುದರಿಂದ ಜಿಲ್ಲೆಯ ಯಾವುದೇ ಪ್ರಾಥಮಿಕ ಆರೋಗ್ಯ ಕೆಂದ್ರ/ ನಗರ ಆರೋಗ್ಯ ಕೆಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಶಿಬಿರವು ನಡೆಯುವುದಿಲ್ಲ.

ಜಿಲ್ಲೆಗೆ ಲಸಿಕೆಯ ಸರಬರಾಜು ಆದ ನಂತರ ಶಿಬಿರದ ಮುಂದಿನ ದಿನಾಂಕವನ್ನು ತಿಳಿಸಲಾಗುವುದು.

18 ವರ್ಷದಿಂದ 44 ವರ್ಷ ವಯೋಮಾನದವರಿಗೆ, ಜಿಲ್ಲಾ ವೆನ್ಲಾಕ್ -ಆಸ್ಪತ್ರೆ ಹಾಗೂ 4 ತಾಲೂಕು ಆಸ್ಪತ್ರೆಗಳಲ್ಲಿ ಮುಂದಿನ ಆರು ದಿನಗಳವರೆಗೆ (17-05-2021) ಲಸಿಕೆಯನ್ನು ನೀಡಲಾಗುವುದು.

COWIN ನಲ್ಲಿ Registration ಮಾಡಿ Appointment schedule ಮಾಡಿ, 4 digit ನ security code ಬಂದವರಿಗೆ ಮಾತ್ರ ಲಸಿಕೆ ತೆಗೆದುಕೊಳ್ಳಲು ಅವಕಾಶವಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.