ಕರಾವಳಿ

ಮೆಡಿಕಲ್ ಆಕ್ಸಿಜನ್ ಹೊತ್ತು ಮಂಗಳೂರಿಗೆ ಆಗಮಿಸಿದ ಕುವೈಟ್ ಹಡಗು : ಬರಮಾಡಿಕೊಂಡ ಶಾಸಕ ಡಾ.ಭರತ್ ಶೆಟ್ಟಿ, ಡಿಸಿ

Pinterest LinkedIn Tumblr

ಮಂಗಳೂರು, ಮೇ.10: ಭಾರತದೊಂದಿಗಿನ ಸಧೃಡ ಅಂತರಾಷ್ಟ್ರೀಯ ಭಾಂದವ್ಯದ ದ್ಯೋತಕವಾಗಿ ಕುವೈಟ್  ಸರಕಾರ ಎರಡು ಕಂಟೈನರ್ ಗಳಲ್ಲಿ ಮೆಡಿಕಲ್ ಆಕ್ಸಿಜನ್, ಟ್ಯಾಂಕ್ಸ್, ಆಕ್ಸಿಜನ್ ಕಾನ್ಸೆನ್ಟ್ರೇಟರ್ ಪೂರೈಕೆಗೆ ನಿರ್ಧರಿಸಿದ್ದು, ಒಂದು ಹಡಗು ಸೋಮವಾರ ನವಮಂಗಳೂರು ಬಂದರಿಗೆ ಆಗಮಿಸಿತು.

ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಹಾಗೂ ಪ್ರಮುಖರು ಹಡಗನ್ನು ಬರಮಾಡಿಕೊಂಡರು.

ಮಂಗಳವಾರ ಇನ್ನೆರಡು ಹಡಗುಗಳ ಮೂಲಕ ನಾಲ್ಕು ಕಂಟೈನರ್ ಗಳಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆಗೆ ಕುವೈಟ್ ಮುಂದಾಗಿದೆ.

ಕುವೈಟ್ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಶಾಸಕ ಡಾ.ವೈ ಭರತ್ ಶೆಟ್ಟಿಯವರು ಧನ್ಯವಾದ ಅರ್ಪಿಸಿದ್ದಾರೆ.

ಈ ಹಿಂದೆ ಭಾರತ ಕುವೈಟಿಗೆ ಎರಡು ಲಕ್ಷ ಡೋಸ್ ಲಸಿಕೆಯನ್ನು ಕಳುಹಿಸಿಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

Comments are closed.