ಕರಾವಳಿ

ಕೊಲ್ಲಿ ರಾಷ್ಟ್ರದಲ್ಲಿ ಮುಂಬೈಯ ರಂಗಕಲಾವಿದ ನಿರ್ದೇಶಕ ಸುಂದರ ಮೂಡಬಿದ್ರೆಗೆ ಸನ್ಮಾನ

Pinterest LinkedIn Tumblr

ರಂಗಭೂಮಿಯ ಸೇವೆಗೆ ಕಲಾಭಿಮಾನಿಗಳ ಪ್ರೋತ್ಸಾಹವೇ ಕಾರಣ : ಸುಂದರ್ ಮೂಡಬಿದ್ರಿ

ಮುಂಬಯಿ : ಮುಂಬಯಿಯ ತುಳು ರಂಗಭೂಮಿಯಲ್ಲಿ ನಾಟಕ ಕರ್ತನಾಗಿ ನಿರ್ದೇಶಕರಾಗಿ ನಟನಾಗಿ ಸುದೀರ್ಘ ಕಾಲ ಸೇವೆ ಮಾಡಿದ ರಂಗ ಸಾಮ್ರಾಟ ಸುಂದರ್ ಮೂಡಬಿದ್ರೆ ಅವರಿಗೆ ಓಮಾನ್ ತುಳುವೆರ್ ಸಮಿತಿ ವತಿಯಿಂದ ಎ. 16 ರಂದು “ಕಲಾ ಸಾಧಕ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು.

ಸುಲ್ತನೇಟ್ ಒಫ್ ಓಮಾನ್ ನ ಮಸ್ಕತ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಖ್ಯಾತ ಹಿನ್ನಲೆ ಗಾಯಕರು ರಮೇಶ್ಚಂದ್ರ .ನಮ್ಮ ಟಿವಿ ನಿರೂಪಕೆರ್ ನವೀನ್ ಶೆಟ್ಟಿ ಎದ್ಮೇಮಾರ್ .ಚಿತ್ರ ನಟಿ ಹಾಗೂ ನಿರೂಪಕಿ ಶ್ವೇತ ಸುವರ್ಣ .ಉಪಸ್ಥಿತರಿದ್ದು ಸುಂದರ್ ಮೂಡಬಿದ್ರೆ ಮತ್ತವರ ಧರ್ಮಪತ್ನಿ ಶ್ರೀಮತಿ ರತ್ನ ಸುಂದರ ಇವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ಜೂಮ್ ವರ್ಚುಯಲ್ ಮೂಲಕ ದೇಶ ವಿದೇಶದ ತುಳು ಕನ್ನಡಿಗರು ವೀಕ್ಷಿಸಿದರು.

ಸನ್ಮಾನವನ್ನು ಸ್ವೀಕರಿಸಿದ ಸುಂದರ ಮೂಡಬಿದ್ರೆ ಅವರು ಮಾಡುತ್ತಾ ನನ್ನ ರಂಗಭೂಮಿಯ ಸಾಧನೆಗೆ ಅಭಿಮಾನಿಗಳ ಆಶೀರ್ವಾದವೇ ಕಾರಣ. ನಾನು ನಾಟಕ ಬರೆಯುವುದಕ್ಕೆ. ನಿರ್ದೇಶಿಸುವುದಕ್ಕೆ .ಮತ್ತು ನಟಿಸುವುದಕ್ಕೆ ಬಹಳಷ್ಟು ಜನ ಸಹಕರಿಸಿದ್ದಾರೆ ಅಲ್ಲದೆ ನನ್ನ ಕುಲಾಲ ಸಮಾಜದ ಬಂಧುಗಳು ಕೂಡ ನನ್ನನ್ನು ಪ್ರೋತ್ಸಾಹಿಸಿದ್ದಾರೆ . ಇಂದು ಸನ್ಮಾನವನ್ನು ನಡೆಸಿದ ಓಮಾನ್ ತುಳುವೆರ್ ಪ್ರೀತಿ ಮತ್ತು ಗೌರವ ಕ್ಕೆ ನಾನು ಋಣಿಯಾಗಿದ್ದೇನೆ ಎಂದು ನುಡಿದರು

ಇಂಡಿಯನ್ ಸೋಷಿಯಲ್ ಕ್ಲಬ್ ಓಮಾನ್ ತುಳುವೆರ್ ತುಳು ವಿಂಗ್ ಇದರ ಸಂಚಾಲಕ ರಮಾನಂದ ಎಂ ಶೆಟ್ಟಿ, ಸಹ ಸಂಚಾಲಕ ಪದ್ಮಾಕರ ಮೆಂಡನ್, ಕೋಶಾಧಿಕಾರಿ ಸುಧೀರ್ ಶೆಟ್ಟಿ, ಜೊತೆ ಕೋಶಾಧಿಕಾರಿ ರವೀಂದ್ರ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಅರುಲ್ ಮೆಕೋಲಿ ಲೋಬೊ, ಕ್ರೀಡಾ ಉಪ ಕಾರ್ಯದರ್ಶಿ ಪ್ರವೀಣ್ ಅಮೀನ್, ಮಹಿಳಾ ಸಂಚಾಲಕಿ ಉಷಾ ಎಲ್. ಆಚಾರ್ಯ, ಕಮ್ಯೂನಿಟಿ ವೆಲ್ಫೇರ್ ಕಾರ್ಯದರ್ಶಿ ಮೋನಬ್ಬ ಎ. ಬ್ಯಾರಿ, ಮಾಧ್ಯಮ ಸಲಹೆಗಾರ ತಾಂತ್ರಿಕ ಸಲಹೆಗಾರ ಶರಥ್ ಕುಮಾರ್ ಹಾಗೂ ಇತರ ಸದಸ್ಯರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಸುಂದರ ಮೂಡಬಿದ್ರಿ ಮುಂಬೈ ರಂಗಭೂಮಿ ಕಂಡ ಹಿರಿಯ ರಂಗಕರ್ಮಿ . ಹಲವಾರು ಯಶಸ್ವಿ ನಾಟಕಗಳನ್ನು ಮುಂಬೈ ರಂಗಭೂಮಿಗೆ ನೀಡಿದವರು ಹಾಗೂ ನಟನೆಯ ಮೂಲಕ ಅಪಾರ ಸಂಖ್ಯೆಯಲ್ಲಿ ಕಲಾಭಿಮಾನಿಗಳ ಮನಸ್ಸನ್ನು ಗೆದ್ದವರು.

ಕಪ್ಪು ಬಿಳಿಪು ಟಿವಿ ಯ ಸಮಯದಲ್ಲಿ ಮುಂಬಯಿಯ ದೂರದರ್ಶನ ತುಳು ಭಾಷೆದ ಪ್ರಥಮ ಕಾರ್ಯಕ್ರಮ ಬೂತ ದರ್ಶನ ಪ್ರಸಾರ ಮಾಡಿದ .ಇವರು ಈ ಕಾರ್ಯಕ್ರಮದಲ್ಲಿ ಗುಣಪಾಲ್ ಉಡುಪಿ ಅವರೊಂದಿಗೆ ಸುಂದರ್ ಮೂಡಬಿದ್ರಿ ಪತ್ನಿ ರತ್ನ ಎಸ್ ಮೂಡಬಿದ್ರೆ ಇವರೊಂದಿಗೆ ಸುಮಾರು ಅರ್ಧ ಗಂಟೆ ಮಿಕ್ಕಿ ತುಳು ಬಾಷೆಯಲ್ಲಿ ಮಾತನಾಡಿ ಮೆಚ್ಚುಗ ಗಳಿಸಿದ್ದಾರೆ.

ಅಲ್ಲದೆ ಸಾಹಿತಿ ಲೇಖಕ ಕೋಡು ಭೋಜ ಶೆಟ್ಟಿ ಬರೆದು ದಿಗ್ದಶಿಸಿದ ಕನ್ನಡ ಬೊಂಬೆ ನಾಟಕದಲ್ಲಿ ಮುಂಬಯಿಯ ಷಣ್ಮುಗಾನಂದ ಸಭಾಗೃಹದಲ್ಲಿ ಎರಡು ಪ್ರದರ್ಶನ ಮಾಡಿ ಅದರಲ್ಲಿ ಸುಂದರ್ ಮೂಡಬಿದ್ರೆ ಯವರೊಂದಿಗೆ ಅವರ ಧರ್ಮಪತ್ನಿ ಶ್ರೀಮತಿ ರತ್ನ ಸುಂದರ ಮೂಡಬಿದ್ರಿ ಯವರು ಅಭಿನಯ ಮಾಡಿರುವರು.

ಇದಲ್ಲದೆ ಅರ್ಧ ಶತಮಾನದಿಂದ ತಾಯಿನಾಡಲ್ಲು ತುಳು ಅಪ್ಪೆನ ಚಾಕಿರಿ ಮಾಡುತ್ತಾ ತುಳು ರಂಗ ಭೂಮಿಯನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸುಂದರ ಮೂಡಬಿದ್ರೆ ಮತ್ತು ಅವರ ಪತ್ನಿ ಯವರ ಕೊಡುಗೆ ಅಪಾರ. ಸಮಸ್ತ ಓಮಾನ್ ತುಳುವರ ಪರವಾಗಿ ಕಲಾ ರತ್ನ ಪ್ರಶಸ್ತಿಯನ್ನು ಸಮರ್ಪಿಸಲಾಯಿತು.

Comments are closed.