ಕರಾವಳಿ

ನಾಳೆಯಿಂದ ಲಾಕ್ಡೌನ್ ಹಿನ್ನೆಲೆ ಭಾನುವಾರವೇ ಕುಂದಾಪುರದಲ್ಲಿ ಸಂಚಾರ ವಿರಳ

Pinterest LinkedIn Tumblr

ಕುಂದಾಪುರ: ಕೊರೋನಾ ನಿಯಂತ್ರಣದ ಹಿನ್ನೆಲೆ ರಾಜ್ಯ ಸರಕಾರ ಮೇ.10 ಸೋಮವಾರದಿಂದ ಮೇ.24ರವರೆಗೆ ಲಾಕ್ಡೌನ್ ಘೋಷಿಸಿದ್ದು ಭಾನುವಾರದಿಂದಲೇ ಜನರ ಸಂಚಾರ ವಿರಳವಾಗಿದೆ.

ಕುಂದಾಪುರ ನಗರದಲ್ಲಿ ಬೆಳಿಗ್ಗೆನಿಂದ ಅಗತ್ಯ ವಸ್ತುಗಳ ಖರೀದಿಗೆ ಜನರು ಆಗಮಿಸಿದ್ದು ದಿನಸಿ, ತರಕಾರಿ, ಹಣ್ಣು ಖರೀದಿಗೆ ಬಂದ ಜನರು 10 ಗಂಟೆಯೊಳಗೆ ಮನೆಯತ್ತ ತೆರಳಿದರು.

ಡಿವೈಎಸ್ಪಿ ಶ್ರೀಕಾಂತ್, ಕುಂದಾಪುರ ನಗರ ಠಾಣೆ ಪಿಎಸ್ಐ ಸದಾಶಿವ ಗವರೋಜಿ, ಸಂಚಾರಿ ಠಾಣೆ ಪಿಎಸ್ಐ ಸುದರ್ಶನ್ ಹಾಗೂ ಪೊಲೀಸ್ ಸಿಬ್ಬಂದಿ ಆಯಕಟ್ಟಿನ ಸ್ಥಳದಲ್ಲಿ ನಾಕಾಬಂದಿ ಏರ್ಪಡಿಸಿ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಿದರು.

Comments are closed.