ಕರಾವಳಿ

ಕೋವಿಡ್ ದೃಢಪಟ್ಟವರು ಕೊನೆ ಘಳಿಗೆಯಲ್ಲಿ ಚಿಕಿತ್ಸೆಗೆ ಬರುವುದಕ್ಕೆ ಆಸ್ಪದ ನೀಡಬಾರದು : ಸಂಸದ ಕಟೀಲ್

Pinterest LinkedIn Tumblr

ಮಂಗಳೂರು : ಕೋವಿಡ್ ದೃಢಪಟ್ಟು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತವರು ಕೆಲವೊಮ್ಮೆ ತೀವ್ರ ತರದ ಉಸಿರಾಟದ ಸಮಸ್ಯೆ ಉಂಟಾಗಿ ಕೊನೆ ಘಳಿಗೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುತ್ತಾರೆ, ಇದಕ್ಕೆ ಆಸ್ಪದ ನೀಡಬಾರದು ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಸೋಂಕಿತರು ತಮಗಾಗುವ ತೊಂದರೆಗಳನ್ನು ಪ್ರತಿದಿನ ಕಂಟ್ರೋಲ್ ರೂಮ್ ನಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳು ಹಾಗೂ ಎ.ಎನ್.ಎಂ ಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುವವರ ಯೋಗಕ್ಷೇಮ ವಿಚಾರಿಸಲು ಜಿಲ್ಲೆಯ 8 ಮೆಡಿಕಲ್ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕೆಂದು ಅವರು ಸಲಹೆ ಮಾಡಿದ್ದಾರೆ.

ಕೊರೋನ ಸೋಂಕು ಬಂದು ಹೋಂ ಐಸೊಲೇಶನ್‍ನಲ್ಲಿ ಇರುವವರು ಏನೆಲ್ಲ ಜವಾಬ್ದಾರಿಗಳನ್ನು ತೆಗೆದು ಕೊಳ್ಳಬೇಕು ಎಂಬ ಬಗ್ಗೆ ಮಾಹಿತಿಯನ್ನು ಒಳಗೊಂಡ ವೀಡಿಯೋ ಚಿತ್ರೀಕರಣ ಮಾಡುವುದರೊಂದಿಗೆ ಜನರಿಗೆ ತಲುಪಿಸಬೇಕು ಎಂದು ಸಂಸದ ಕಟೀಲ್ ತಿಳಿಸಿದ್ದಾರೆ.

Comments are closed.